ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಬುರುಡೆ ರಹಸ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗ್ಲಗುಡ್ಡೆ ಅರಣ್ಯ ಪ್ರದೇಶಕ್ಕೆ ಬೆಂಗಳೂರಿನ ಎಫ್ ಎಸ್ ಎಲ್ ತಜ್ಞರು ಬಂದಿದ್ದಾರೆ.
ಬಂಗ್ಲೆಗುಡ್ಡೆಯಲ್ಲಿ ಬರುಡೆ ಸಿಕ್ಕ ಜಾಗದಲ್ಲಿ ಎಫ್ ಎಸ್ ಎಲ್ ಅಧಿಕಾರಿಗಳ ಪರಿಶೀಲನೆ ನಡೆಸಿದ್ದಾರೆ. ಎಸ್ಐಟಿ ಅಧಿಕಾರಿಗಳ ಜೊತೆ ಬೆಂಗಳೂರಿನ ಎಫ್ಎಸ್ಎಲ್ ವಿಭಾಗದ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಎಫ್ ಎಸ್ ಎಲ್ ಮತ್ತು SIT ಅಧಿಕಾರಿಗಳೊಂದಿಗೆ ಪ್ರದೀಪ್ ತೆರಳಿದ್ದಾರೆ. ಬುರುಡೆ ಷಡ್ಯಂತ್ರದ ಪ್ರಕರಣದಲ್ಲಿ ಪ್ರದೀಪ್ ಕುಲಾಲ್ ಭಾಗಿಯಾಗಿದ್ದರು. ಪ್ರಕರಣದ ಕುರಿತು BNSS ಸೆಕ್ಷನ್ 183 ಅಡಿ ಪ್ರದೀಪ್ ಕುಲಾಲ್ ಹೇಳಿಕೆ ನೀಡಿದರು.
BNSS ಸೆಕ್ಷನ್ 183 ಅಡಿ ತಪ್ಪೊಪ್ಪಿಗೆ ಹೇಳಿಕೆಯನ್ನು ಪ್ರದೀಪ್ ನೀಡಿದ್ದಾರೆ. ರಾತ್ರಿ ಹೊತ್ತು ಕಾಡಿನಲ್ಲಿ ಬರುಡೆ ತೆಗೆಯುವ ವಿಡಿಯೋದಲ್ಲಿದ್ದ ಪ್ರದೀಪ್ ಇದ್ದರು.

