ಮಂಗಳೂರು: ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಸಾಹಿತ್ಯಪರ ಅಮೃತ ಪ್ರಕಾಶ ಪತ್ರಿಕೆ ವತಿಯಿಂದ ನಡೆಯುವ 42ನೇಯ ಸರಣಿ ಕೃತಿ ದುಬೈಯ ಲೇಖಕ ಬಿ.ಕೆ. ಗಣೇಶ್ ರೈ ಅವರ ಲೇಖನ ಸಂಕಲನ `ಕಡಲಾಚೆಯ ರಮ್ಯ ನೋಟ ಕೃತಿಯೂ ಮಂಗಳೂರು ಪತ್ರಿಕಾ ಭವನದಲ್ಲಿ ಮಾರ್ಚ್ 4 ರಂದು ಮಂಗಳವಾರ 11 ಗಂಟೆಗೆ ಬಿಡುಗಡೆಗೊಳ್ಳಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬುದಾಬಿ ಕರ್ನಾಟಕ ಸಂಘ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ವಹಿಸುವರು. ಯು. ಎ. ಇ. ಬಂಟ್ಸ್ ಸಂಘದ ಅಧ್ಯಕ್ಷರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಕೃತಿ ಬಿಡುಗಡೆಗೊಳಿಸುವರು.

ಲೇಖಕಿ ನಿವೃತ್ತ ಶಿಕ್ಷಕಿ ಡಾ| ಅರುಣಾ ನಾಗರಾಜ್ ಕೃತಿ ಪರಿಚಯ ಮಾಡುವರು. ಮುಖ್ಯ ಅತಿಥಿಗಳಾಗಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್ ಇಂದಾಜೆ ವಹಿಸುವರು.

ಲೇಖಕರಾದ ಬಿ.ಕೆ. ಗಣೇಶ್ ರೈ, ಅಮೃತ ಪ್ರಕಾಶ ಪತ್ರಿಕೆ ಸಂಪಾದಕಿ ಡಾ| ಮಾಲತಿ ಶೆಟ್ಟಿ ಮಾಣೂರು ಉಪಸ್ಥಿತರಿರುವರು. ಸುರೇಖಾ ಯಳವಾರ ಕಾರ್‍ಯಕ್ರಮ ನಿರೂಪಿಸುವರು.