ಮಂಗಳೂರು: ಖಾಸಗಿ ಚಾಟಿಂಗ್, ವಿಡಿಯೋ ಕಾಲ್ ರೆಕಾರ್ಡಿಂಗ್ ಇಟ್ಟುಕೊಂಡು ಸಮಾಜ ಸೇವಕರಿಂದ ಬ್ಲ್ಯಾಕ್ ಮೇಲ್ ನಡೆದಿದ್ದು, ಸಮಾಜ ಸೇವೆ ಹೆಸರಿನಲ್ಲಿ ಮಂಗಳೂರಿನಲ್ಲಿ ‘ಬ್ಲ್ಯಾಕ್ ಮೇಲ್’ ದಂಧೆ? ನಡೀತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಬ್ಲ್ಯಾಕ್ ಮೇಲ್ ಗೆ ಹೆದರಿ ವಿಷ ಸೇವಿಸಿ ಆತ್ಮಹತ್ಯೆಗೆ ಯುವಕ ಯತ್ನಿಸಿದ್ದಾನೆ.
ಮಂಗಳೂರಿನ ಖ್ಯಾತ ಸಮಾಜ ಸೇವಕರು ಸಮಾಜ ಸೇವಕನನ್ನೇ ‘ಬ್ಲ್ಯಾಕ್ ಮೇಲ್’ ಮಾಡಿದ್ದಾರೆ. ಬಡ ಮುಸ್ಲಿಂ ಯುವತಿಯ ಮದುವೆಗೆ ಕ್ರೌಡ್ ಫಂಡಿಂಗ್ ಮಾಡಿದವನಿಗೆ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಮಂಗಳೂರಿನ ಖ್ಯಾತ ಸಮಾಜ ಸೇವಕರ ವಿರುದ್ದವೇ ಗಂಭೀರ ಆರೋಪ ಕೇಳಿಬಂದಿದೆ.
ಖ್ಯಾತ ಸಮಾಜ ಸೇವಕರಾದ ಆಸಿಫ್ ಆಪತ್ಬಾಂಧವ, ರವೂಫ್ ಬೆಂಗ್ರೆ ಹಾಗೂ ಮಿನಾಜ್ ಎಂಬ ಯುವತಿ ವಿರುದ್ದ ಬ್ಲ್ಯಾಕ್ ಮೇಲ್ ಆರೋಪ ಕೇಳಿಬಂದಿದ್ದು, ಬ್ಲ್ಯಾಕ್ ಮೇಲ್ ಗೆ ಒಳಗಾದ ಮತ್ತೊಬ್ಬ ಸಮಾಜ ಸೇವಕ ಅಕ್ಬರ್ ಸಿದ್ದೀಕ್ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾನೆ.
ಸಹೋದರಿ ಮದುವೆಗೆ ಧನ ಸಹಾಯ ಕೋರಿ ಸಮಾಜ ಸೇವಕ ಅಕ್ಬರ್ ಸಿದ್ದೀಕ್ ಹಿಂದೆ ಮಿನಾಜ್ ಬಿದ್ದಿದ್ದನು. ಅಲ್ ಮದೀನಾ ಟ್ರಸ್ಟ್ ನ ಅಕ್ಬರ್ ಸಿದ್ದೀಕ್ ಎಂಬ ಯುವಕನಿಗೆ ಮಿನಾಜ್ ಹಿಂದೆ ಬಿದ್ದಿದ್ದನು. ಹೀಗಾಗಿ ಅಲ್ ಮದೀನಾ ಟ್ರಸ್ಟ್ ಹೆಸರಿನಲ್ಲಿ ಅಕ್ಬರ್ ಸಿದ್ದೀಕ್ ಕ್ರೌಡ್ ಫಂಡಿಂಗ್ ನಡೆಸಿದ್ದನು.
ಸೋಶಿಯಲ್ ಮೀಡಿಯಾ ಮೂಲಕ ಮನವಿ ಮಾಡಿ ಅಕ್ಬರ್ 25 ಸಾವಿರದಷ್ಟು ಹಣ ಸಂಗ್ರಹಿಸಿದ್ದನು. ಆದರೆ ಹಣ ಸಾಕಾಗಲ್ಲ ಆಂತ ಎ.8ರಂದು ಅಕ್ಬರ್ ಗೆ ಯುವತಿ ಮಿನಾಜ್ ಕರೆ ಮಾಡಿದ್ದಳು. ಹೆಚ್ಚು ಹಣ ಸಂಗ್ರಹಿಸಿ ಕೊಟ್ಟರೆ ಲೈಂಗಿಕ ಸುಖದ ಆಮಿಷ ಒಡ್ಡಿದ್ದಾಗಿ ಅಕ್ಬರ್ ಆರೋಪ ಮಾಡಿದ್ದಾನೆ.
ಅಕ್ಬರ್ ಸಿದ್ದೀಕ್ ಜೊತೆಗಿನ ಚಾಟಿಂಗ್, ವಿಡಿಯೋ ಕರೆಯನ್ನು ಮಿನಾಜ್ ರೆಕಾರ್ಡ್ ಮಾಡಿದ್ದಳು. ವಿಡಿಯೋ ಹಾಗೂ ಚಾಟ್ ಮುಂದಿಟ್ಟು ಆಸಿಫ್ ಆಪತ್ಬಾಂಧವ ಮತ್ತು ರವೂಫ್ ಬೆಂಗ್ರೆ ಹಣ ಕೇಳಿದ್ದರು.
3 ಪವನ್ ಚಿನ್ನ ಹಾಗೂ 3 ಲಕ್ಷ ಹಣ ನೀಡದೇ ಇದ್ದರೆ ವಾಟ್ಸಪ್ ಚಾಟ್ ಹಾಗೂ ವಿಡಿಯೋ ಕಾಲ್ ನ ವಿಡಿಯೋ ವೈರಲ್ ಬೆದರಿಕೆ ಹಾಕಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಮಿನಾಜ್ ಹಾಗೂ ಅಕ್ಬರ್ ಚಾಟ್ ಹಾಗೂ ವಿಡಿಯೋ ಕಾಲ್ ರೆಕಾರ್ಡಿಂಗ್ ಹರಿಬಿಡುವ ಬೆದರಿಕೆ ಹಾಕಿದ್ದಾರೆ.
ಮರ್ಯಾದೆಗೆ ಅಂಜಿ ವಿಷ ಸೇವಿಸಿ ಆತ್ಮಹತ್ಯೆಗೆ ಬಂಟ್ವಾಳ ನಿವಾಸಿ ಅಕ್ಬರ್ ಸಿದ್ದೀಕ್ ಯತ್ನಿಸಿದ್ದಾರೆ. ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಂಡವರಕಲ್ಲು ನಿವಾಸಿ ಅಕ್ಬರ್ ಸಿದ್ದಿಕ್ , ಎ.10ರ ಒಳಗಡೆ ಹಣ ನೀಡದಿದ್ದರೆ ಜಾಲತಾಣದಲ್ಲಿ ವಿಡಿಯೋ, ಚಾಟಿಂಗ್ ಬಹಿರಂಗ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಬ್ಲಾಕ್ಮೇಲ್, ಬೆದರಿಕೆಯಿಂದ ನೊಂದು ಅಕ್ಬರ್ ಸಿದ್ದಿಕ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಮೂವರು ಎಸ್ಕೇಪ್ ಆಗಿದ್ದಾರೆ. ಹಲವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರೋ ಆಸಿಫ್ ಆಪತ್ಬಾಂಧವ, ರವೂಫ್ ಬೆಂಗ್ರೆ , ಸದ್ಯ ಆರೋಪಿಗಳ ಪತ್ತೆಗೆ ಪುಂಜಾಲಕಟ್ಟೆ ಪೊಲೀಸರು ಬಲೆ ಬೀಸಿದ್ದಾರೆ.

