ಮಂಗಳೂರು : ಧರ್ಮಸ್ಥಳದ ಸನ್ನಿಧಿ ಗೆಸ್ಟ್ ಹೌಸ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸುದ್ದಿಗೋಷ್ಟಿ ನಡೆಸಿ ಕಳೆದ ಮೂರ್ನಾಲ್ಕು ದಿನಗಳ ಕಾಲ ದೆಹಲಿಯಲ್ಲಿ ರಾಷ್ಟ್ರೀಯ ನಾಯಕರ ಭೇಟಿ ಮಾಡಿದ್ದೇನೆ. ದೆಹಲಿಯಿಂದ ನೇರವಾಗಿ ಧರ್ಮಸ್ಥಳ ಬಂದು ಮಂಜುನಾಥ ಸ್ವಾಮಿ ದರ್ಶನ ಪಡೆದಿದ್ದೇನೆ. ಮಂಜುನಾಥೇಶ್ವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ. ರಾಜ್ಯದಲ್ಲಿ ಭೀಕರ ಬರಗಾಲದ ಸನ್ನಿವೇಶ ಇದೆ, ಅದು ಸರಿಯಾಗಬೇಕು ಎಂದರು.
ರೈತ ಬೆಳೆದ ಬೆಳೆಗೆ ಒಳ್ಳೆಯ ದಿನಗಳು ಬರಲಿ ಎಂದು ಪ್ರಾರ್ಥನೆ ಮಾಡಿದ್ದೇನೆ. ಅದರ ಜೊತೆಗೆ ಕರ್ನಾಟಕದಲ್ಲಿ ಮತ್ತೊಮ್ಮೆ ಜನಪರ ಒಳ್ಳೆಯ ಸರ್ಕಾರ ಬರಲಿ. ಹಿಂದೂಗಳ ರಕ್ಷಣೆ, ರಾಜ್ಯದ ಅಭಿವೃದ್ಧಿಗಾಗಿ ಸರ್ಕಾರ ಬರಲು ಪ್ರಾರ್ಥನೆ. ಪರಿಷತ್ ಚುನಾವಣೆಯಲ್ಲಿ ನಮ್ಮ ಇಬ್ಬರು ಅಭ್ಯರ್ಥಿಗಳಿದ್ದರು. ಅತ್ಯಂತ ಹಿರಿಯ ಹಾಗೂ ಪಕ್ಷಕ್ಕೆ ದುಡಿದವರನ್ನ ಅಭ್ಯರ್ಥಿ ಮಾಡಿದ್ದೆವು. ಆದರೆ ಚುನಾವಣೆ ವೇಳೆ ನಡೆದ ಅಡ್ಡಮತದಾನ ನನ್ನನ್ನೂ ಸೇರಿ ಕಾರ್ಯಕರ್ತರಿಗೆ ನೋವು ತಂದಿದೆ ಎಂದರು.
ಬಿಜೆಪಿಯ ಶಾಸಕ ರಿಂದಲೇ ಆದ ಅಡ್ಡ ಮತದಾನ ಬೇರೆ ಬೇರೆ ಚರ್ಚೆ ಹುಟ್ಟು ಹಾಕಿತ್ತು. ಹಾಗಾಗಿ ನನ್ನ ಮನಸ್ಸಿನ ನೋವಿನಿಂದ ಧರ್ಮಸ್ಥಳದಲ್ಲಿ ಶಾಸಕಾಂಗ ಸಭೆ ಆಗಬೇಕು ಅಂದಿದ್ದೆ. ನಾನೊಬ್ಬ ಭಾವನಾತ್ಮಕ ವ್ಯಕ್ತಿ, ನನ್ನ ಮನಸ್ಸಿಗೆ ತೋಚಿದ್ದನ್ನ ಹೇಳಿದ್ದೆ. ಪಕ್ಷದ ಹಿರಿಯ ನಾಯಕರು ಅಲ್ಲಿಯ ತನಕ ಬೇಡ, ವರಿಷ್ಠರ ಗಮನಕ್ಕೆ ತರೋಣ ಅಂದರು. ನಾನು ಅವರ ಮಾತಿಗೆ ಗೌರವ ಕೊಟ್ಟು ಮಂಜುನಾಥನ ದರ್ಶನ ಪಡೆಯಲು ಇಲ್ಲಿಗೆ ಬಂದೆ. ಸಾಕಷ್ಟು ಅಪಪ್ರಚಾರ ಅವತ್ತು ಮತ್ತು ಇವತ್ತು ಆಗ್ತಾ ಇದೆ ಎಂದರು.
ನಾನು ಪವಿತ್ರ ಕ್ಷೇತ್ರದಲ್ಲಿ ನಿಂತು ಮಾತನಾಡ್ತಾ ಇದಾನೆ. ಅಡ್ಡಮತದಾನನ ವೇಳೆ ಡಿಕೆಶಿ ಮತ್ತು ವಿಜಯೇಂದ್ರ ಸಂಬಂಧ, ಆತ್ಮೀಯತೆ ಎಂಬ ಚರ್ಚೆಯಾಯ್ತು. ನಮ್ಮವರೇ ಇದನ್ನ ಚರ್ಚೆಗೆ ಗ್ರಾಸ ಮಾಡಿದ್ದಾರೆ ಎಂಬ ಅರಿವು ಇದೆ. ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಎಲ್ಲರ ಆಶೀರ್ವಾದದಿಂದ ಜವಾಬ್ದಾರಿ ನಿಭಾಯಿಸ್ತಾ ಇದೇನೆ. ರಾಜ್ಯಾಧ್ಯಕ್ಷನಾಗಿ ಇಂಥ ಕೀಳು ಮಟ್ಟದ ಕೆಲಸ ನಾನು ಮಾಡಲ್ಲ. ಡಿಕೆಶಿ ಜೊತೆ ನನಗೆ ಯಾವುದೇ ವ್ಯವಹಾರಿಕ ಅಥವಾ ಆತ್ಮೀಯತೆ ಇಲ್ಲ. ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಸಹಜ ಗೌರವ ಕೊಟ್ಡಿದ್ದೇನೆ ಎಂದರು.
ಅಪಪ್ರಚಾರ ಮಾಡಿದವರಿಗೆ ಭಗವಂತ ಒಳ್ಳೆದು ಮಾಡಲಿ ಎಂಬ ಪ್ರಾರ್ಥನೆ ಸಲ್ಲಿಸಿದ್ದೇನೆ. ರಾಜ್ಯದ ಲಕ್ಷಾಂತರ ಕಾರ್ಯಕರ್ತರ ಮೇಲೆ ನನಗೆ ವಿಶ್ವಾಸ ಇದೆ. ಜನ ವಿರೋಧಿ ಕಾಂಗ್ರೆಸ್ ಸರ್ಕಾರವನ್ನ ಬುಡ ಸಮೇತ ಕಿತ್ತು ಹಾಕುವ ಕೆಲಸ ಆಗಲಿದೆ. ಸಾಕಷ್ಟು ಜನ ಶಾಸಕರು ಮೊನ್ನೆ ದಿನ ನನಗೆ ಕರೆ ಮಾಡಿದ್ದಾರೆ. ಆವತ್ತು 17 ಜನ ಶಾಸಕರು ಯಡಿಯೂರಪ್ಪ ಅವರ ಮೇಲೆ ನಂಬಿಕೆ ಇಟ್ಟು ಬಿಜೆಪಿಗೆ ಬಂದರು. ಅದರಲ್ಲಿ 15 ಜನ ಗೆದ್ದು ಬಂದು ಮತ್ತೆ ಶಾಸಕರಾಗಿದ್ರು, ಆದರೆ ಈಶ್ವರಪ್ಪನವರ ಹೇಳಿಕೆ ಬಗ್ಗೆ ಬಹಳ ಬೇಸರ ಆಗಿದೆ. ಹಿಂದೂ ಕಾರ್ಯಕರ್ತರ ಹತ್ಯೆ, ಮೊಕದ್ದಮೆಗಳ ಬಗ್ಗೆ ಈಶ್ವರಪ್ಪರಿಗೆ ನೆನಪಿರಬೇಕು ಎಂದರು.
ಅಂತಹ ಸಂಧರ್ಭದಲ್ಲಿ ಆ 17 ಜನ ಶಾಸಕರು ಕೈ ಜೋಡಿಸಿದ ಪರಿಣಾಮ ಬಿಜೆಪಿ ಒಳ್ಳೆಯ ಸರ್ಕಾರ ಕೊಟ್ಟಿದೆ. ಆಗ ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವ ಆಗಿ ಎಂಜಾಯ್ ಮಾಡಿದ್ರು, ಅವರು ಏನು ಕೆಲಸ ಮಾಡಿದ್ದಾರೆ ಹೇಳಲ್ಲ, ಗುತ್ತಿಗೆದಾರ ಕೂಡ ಆತ್ಮಹತ್ಯೆ ಮಾಡಿದ್ದ. ಅಡ್ಡಮತದಾನದಲ್ಲಿ ನಮ್ಮ ಶಾಸಕರ ಬಗ್ಗೆ ಅನುಮಾನ ಪಡುವಂತಾಗಿದೆ. ಇವತ್ತು ಪಕ್ಷಕ್ಕೆ ದ್ರೋಹ ಬಗೆದವನ್ನ ವರಿಷ್ಠರು ಗಮನಿಸ್ತಾರೆ, ಸತ್ಯ ಇಂದಲ್ಲ ನಾಳೆ ಹೊರಬರುತ್ತೆ. ವಿಜಯೇಂದ್ರ ಕಾಂಗ್ರೆಸ್ ಜೊತೆ ಸೇರಿ ಅಡ್ಡ ಮತದಾನಕ್ಕೆ ಸಹಕರಿಸಿದ್ದಾರೆ ಅನ್ನೋದು ಸತ್ಯಕ್ಕೆ ದೂರ. ಇವತ್ತಿಗೆ ಈ ವಿವಾದಕ್ಕೆ ಇತೀಶ್ರೀ ಹಾಡಿ, ರಾಜ್ಯಾದ್ಯಂತ ಪ್ರವಾಸ ಮಾಡ್ತೇನೆ ಎಂದರು.
ಈಗಿನ ಮುಖ್ಯಮಂತ್ರಿ ಎಷ್ಟೇ ಬಲಿಷ್ಠ ಹಾಗೂ ಆರ್ಭಟ ಇದ್ದರೂ ನಮ್ಮ ಸರ್ಕಾರ ತರ್ತೇವೆ. ಏನೇ ಗೌಪ್ಯ ಮತದಾನ ಆದರೂ ಸತ್ಯ ಗೊತ್ತಾಗುತ್ತದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಇದೆ, ಅವರು ಎಲ್ಲಾ ಮಾಹಿತಿ ತೆಗೆದುಕೊಳ್ತಾರೆ. ಬೆಂಗಳೂರು ತಲುಪಿದ ಮೇಲೆ ವರದಿ ಬಗ್ಗೆ ಸಿ.ಟಿ.ರವಿ ಅವರ ಜೊತೆ ಮಾತನಾಡ್ತೇನೆ. ಈವರೆಗೆ ವರದಿ ಕೊಟ್ಟಿಲ್ಲ, ಬೆಂಗಳೂರು ಹೋಗಿ ಮಾತನಾಡ್ತೇನೆ. ಸೋಮಶೇಖರ್ ನಮ್ಮ ಪಕ್ಷದ ಮೂರು ಶಾಸಕರ ಜೊತೆ ಸಂಪರ್ಕ ಇದ್ದರು ಎಂಬ ಮಾಹಿತಿ ಇದೆ. ಹಾಗಾಗಿ ಅವರನ್ನು ರಕ್ಚಿಸಲು ಈ ರೀತಿ ಮಾತನಾಡ್ತಾ ಇದಾರೆ. ಸದಾನಂದ ಗೌಡರು ಅಡ್ಡಮತದಾನ ಆದ ಬಳಿಕ ನನಗೆ ಕರೆ ಮಾಡಿದ್ದರು ಎಂದರು.
ನನಗೆ ರೀಚ್ ಆಗಲು ಆಗಿಲ್ಲ, ಪ್ರಧಾನ ಕಾರ್ಯದರ್ಶಿಗೆ ಕರೆ ಮಾಡಿದ್ದರು ಎಂದರು. ನಾನು ಕಾರ್ಯದರ್ಶಿಗೆ ಕೇಳಿದ್ದೆ, ಆದರೆ ಅಂತ ಫೆಸಿಪಿಕ್ ಮಾಹಿತಿ ಕೊಟ್ಟಿಲ್ಲ ಅಂದರು. ಸಹಜ ಮಾಹಿತಿ ಕೊಟ್ಟಿದ್ದಾರೆ, ಬೆಂಗಳೂರು ಹೋಗಿ ಅವರನ್ನ ಕೂಡ ಭೇಟಿ ಮಾಡ್ತೇನೆ. ಶಾಸಕರ ಮೇಲೆ ಹಾಗೆ ಅನುಮಾನ ಪಟ್ಟು ಕೊಳ್ಳಲು ಆಗಲ್ಲ, ಚುನಾವಣೆ ಗೆ ಮುನ್ನ ಇಂಥಹ ಮಾಹಿತಿ ಬರ್ತಾ ಇರುತ್ತೆ. ಈಶ್ವರಪ್ಪ ಶಾಸಕರಲ್ಲ, ಪಕ್ಷದಲ್ಲೂ ಇಲ್ಲ, ಅವರ ಬಗ್ಗೆ ನಾನು ಮಾತನಾಡಲ್ಲ. ಸದ್ಯ ನನ್ನ ಟೈಂ ಚೆನ್ನಾಗಿದೆ, ನಾನು ಕಳೆದ ಹಲವು ವರ್ಷಗಳಿಂದ ಗಮನಿಸ್ತೇನೆ. ನನ್ನ ನಡವಳಿಕೆ ಸರಿ ಇದೆ, ಹಿರಿಯರನ್ನ ಗಣನೆಗೆ ತೆಗೆದುಕೊಳ್ತಾ ಇದೇನೆ ಎಂದರು.
ಹಿರಿಯರಿಗೆ ಅಗೌರವ ಮಾಡುವ ಪ್ರಶ್ನೆ ಉದ್ಭವಿಸಲ್ಲ. ರಾಜ್ಯದಲ್ಲಿ ಪಕ್ಷದ ಜವಾಬ್ದಾರಿ ಕೊಡುವಾಗ ರಾಷ್ಟ್ರೀಯ ನಾಯಕರು ನಿರ್ಧಾರ ಮಾಡಿದ್ದಾರೆ. ಡಿಕೆಶಿವಕುಮಾರ್ ಪಾತ್ರ ಅಡ್ಡಮತದಾನದಲ್ಲಿ ಇದ್ತಾ ಇಲ್ವಾ ನೋಡೋಣ. ನಮ್ಮ ಶಾಸಕರು ಸ್ವಯಂ ಪ್ರೇರಿತವಾಗಿ ಹೋಗಿಲ್ಲ, ಹೊರಗಿನವರು ಇದ್ದಾರೆ. ನನ್ನನ್ನ ಅಧ್ಯಕ್ಷ ಮಾಡಿದ್ದು ಪಕ್ಚ ಸಂಘಟನೆಗೆ, ಮುಖ್ಯಮಂತ್ರಿ ಮಾಡಲು ಅಲ್ಲ. ನಮ್ಮ ಹಿರಿಯರು ಆ ಮನಸ್ಥಿತಿಯಿಂದ ಹೊರಗೆ ಬರಬೇಕು. ನಾನು ಯಾವುದೇ ತಪ್ಪು ಮಾಡಿಲ್ಲ, ಭಗವಂತನ ಹೆಸರಲ್ಲೇ ಪ್ರಮಾಣ ವಚನ ಮಾಡೋದು. ಹಿರಿಯರ ಸೂಚನೆಯಂತೆ ಧರ್ಮಸ್ಥಳ ಶಾಸಕಾಂಗ ಸಭೆ ಕೈ ಬಿಟ್ಟಿದ್ದೇನೆ ನಾನು ಭಕ್ತನಾಗಿ ಬಂದು ದೇವರ ದರ್ಶನ ಪಡೆದಿದ್ದೇನೆ ಎಂದರು.
ಡಿಕೆಶಿಯವರು ರಾಜೇಶ್ ನಾಯಕ್, ಬ್ರಿಜೇಶ್ ಚೌಟ ಮನೆಗೆ ಬಂದರೂ ನಮ್ಮವರೇ ಅಂಥ ಅನಿಸುತ್ತದೆ. ಅಂಥ ಬಹುಮುಖ ಪ್ರತಿಭೆ ಈ ರಾಜ್ಯದ ಮುಖ್ಯಮಂತ್ರಿ. ನಾನು ಅಡ್ಜೆಸ್ಡ್ ಮೆಂಟ್ ರಾಜಕೀಯ ಮಾಡಿಲ್ಲ, ನನ್ನ ಬಗ್ಗೆ ಸ್ಪಷ್ಟತೆ ಇದೆ. ಸುನೀಲ್ ಕುಮಾರ್ ಅವರು ಕಮಿಟಿ ಮೀಟಿಂಗ್ ಕಾರಣ ಇಲ್ಲಿಗೆ ಬಂದಿಲ್ಲ. ದೆಹಲಿಯಲ್ಲಿ ನಾನು, ಆರ್.ಅಶೋಕ್ ಬಿಡದಿ ವಿಷಯವಾಗಿ ದೆಹಲಿಯಲ್ಲಿ ಚರ್ಚೆ ಮಾಡಿದ್ದೇವೆ. ಬಿಡದಿ ಹೋರಾಟ ನಾಳೆ ಬೆಂಗಳೂರಿನಲ್ಲಿ ಘೋಷಣೆ ಮಾಡ್ತೇನೆ. ಗೃಹ ಲಕ್ಷ್ಮಿ ಅಕ್ರಮದ ಬಗ್ಗೆ ಸಿಎಜಿ ವರದಿಯಲ್ಲೂ ಬಂದಿದೆ. ಮೊದಲು ಗ್ಯಾರಂಟಿ ಅಧ್ಯಕ್ಷರನ್ನ ಬರ್ಖಾಸ್ತು ಮಾಡಿ, ಅಧಿಕಾರಿಗಳ ಮೇಲೆ ವಿಶ್ವಾಸ ಇದೆ. ಕಾಂಗ್ರೆಸ್ ಪುಢಾರಿಗಳನ್ನ ಅಧ್ಯಕ್ಷ ಮಾಡಿ ಹಣ ಹೊಡೆದಿದ್ದಾರೆ. ತಕ್ಷಣ ಅವರನ್ನ ಮನೆಗೆ ಕಳುಹಿಸಿ ಅಧಿಕಾರಿಗಳಿಗೆ ಜವಾಬ್ದಾರಿ ಕೊಡಿ ಎಂದರು.

