ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸಹಿತ ಬಿಜೆಪಿ ನಾಯಕರು ಮಂಗಳೂರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ತಮಗೆ ಬೇಕಾದ ಮೃತರ ಮನೆಗೆ ಭೇಟಿ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಇಲಾಖೆ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ ನಾಯಕರ ಮನೆಗೆ ಹೋದ್ರೆ ,ಹಿಂದೂ ತಂಟೆಗೆ ಬಂದ್ರೆ ಹೋರಾಟ ಮಾಡ್ತೇವೆ. ಇವ್ರ ಆಡಳಿತದಲ್ಲಿ ಇದೇ ಪೊಲೀಸರು ಇಲ್ಲಿ ಇದ್ರು. ಅವರು ಕಾನೂನು ಪ್ರಕಾರ ಹೋಗ್ತಾರೆ. ಅದನ್ನು ಬಿಟ್ಟುಕೆಲಸ ಮಾಡಿದ್ರೆ ಅವರ ಕೆಲಸ ಕಳೆದು ಕೊಳ್ತಾರೆ ಎಂದು ಸುದ್ದಿಗೋಷ್ಠಿ ನಡೆಸಿ ಐವನ್ ಡಿಸೋಜಾ ಹೇಳಿಕೆ ನೀಡಿದರು.
ಪೊಲಿಸರು ಗೂಂಡಾ ವರ್ತನೆ ತೋರ್ತರೆ ಎನ್ನುತ್ತಾರೆ. ಅವ್ರ ವಿರುದ್ದ ಆಂದೋಲನ ಮಾಡ್ತೇವೇ ಹೇಳ್ತಾರೆ. ನಮ್ಮ ಆಡಳಿತದಲ್ಲಿ ಪೊಲೀಸರು ಕಾನೂನು ಪಾಲನೆ ಮಾಡ್ತಾರೆ. ಬಿಜೆಪಿ ನಾಯಕರು ವಿರೋಧ ಪಕ್ಷದ ನಾಯಕರು ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುತ್ತಿದ್ದಾರೆ. ಕಾನೂನು ಬಿಟ್ಟು ಏನು ಕೆಲಸ ಅವ್ರು ಮಾಡಿದ್ದಾರೆ.
ನಿಮ್ಮ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಮನವಿ ಮಾಡ್ತೇನೆ. ಕ್ರಮ ಕೈಗೊಂಡರೆ ಪೊಲಿಸರಿಗೆ ಬೈತೀರಿ…? ಕ್ರಮ ಕೈಗೊಳ್ಳದ್ದಿದ್ದಾರೆ ಕಾನೂನು ಸುವವ್ಯಸ್ಥೆ ಇಲ್ಲ ಅಂತೀರಾ..? ಬಿಜೆಪಿಗೆ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ಇರಬಾರದು ಅಂತಾ..? ಆದ್ರೆ ಕಾಂಗ್ರೇಸ್ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ಬಯಸುತ್ತೆ. ಒಂದು ಪ್ರಕರಣ ಎನ್ಐಎ ಗೆ ನೀಡಿದ್ದೀರಿ…? ಒಂದು ಕೇಸು ಮಾತ್ರ ಯಾಕೆ ನೀಡಿದ್ರಿ ಎಂದರು.
ಬೇರೆ ಪ್ರಕರಣ ಯಾಕೆ ನೀಡಿಲ್ಲ..? ಈ ಹತ್ಯೆ ಪಿಎಪ್ ಐ ಮಾಡಿದೆ ಅಂತೀರಾ…? ಎಲ್ಲಿದೆ ದಾಖಲೆ ಇದ್ಯಾ…? ಇಲ್ಲಿ ಇನ್ನೂ ಕೆಲವು ಹತ್ಯೆ ಆಗಿದೆ ಯಾಕೆ ಅದ್ರ ಬಗ್ಗೆ ಧ್ವನಿ ಎತ್ತಲ್ಲ. ಇದರಲ್ಲಿ ಹಣ ನೀಡಿದ್ದಾರೆ ಅಂತಿರ ಹಾಗಿದ್ದಾರೆ ಎಲ್ಲಾ ಪ್ರಕರಣಗಳನ್ಬು ಎನ್ಐಎ ನೀಡಲಿ. ಪ್ರವೀಣ್ ನೆಟ್ಟಾರು ಬಳಿಕದ ಎಲ್ಲಾ ಪ್ರಕರಣ ಎನ್ಐಎಗೆ ನೀಡಲಿ. ಸಂಸದರು ಒಂದು ಪ್ರಕರರಣ ಮಾತ್ರ ಎನ್ಐಎ ಗೆ ನೀಡಿ ಎಂದು ಮನವಿ ಮಾಡಿದ್ದಾರೆ.
ಆದರೆ ಜಿಲ್ಲೆಯಲ್ಲಿ ಶಾಂತಿಗಾಗಿ ಎಲ್ಲಾ ಪ್ರಕರಣ ಎನ್ಐಎಗೆ ನೀಡಲು ಮನವಿ ಮಾಡಲಿ. ಜಿಲ್ಲೆಯಲ್ಲಿ ಶಾಂತಿ ನೆಲೆಸದಂತೆ ಬಿಜೆಪಿ ನಾಯಕರು ಬಯಸ್ತಾರೆ. ಎನ್ಐಎ ಯನ್ನು ತಮಗೆ ಬೇಕಾದವರಿಗಾಗಿ ಬಳಕೆ ಮಾಡ್ತಾ ಇದ್ದಾರೆ ಎಂದು ಮಂಗಳೂರಿನಲ್ಲಿ ಎಂಎಲ್ಸಿ ಐವನ್ ಡಿಸೋಜಾ ಹೇಳಿಕೆ ನೀಡಿದರು.

