ಮಂಗಳೂರು: ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕರು ಹಿಂದೂಗಳ ಮೇಲೆ ನಡೆಸಿದ ಹೇಯ ಕೃತ್ಯವನ್ನೂ ಸಹ ರಾಜಕೀಯಗೊಳಿಸಿ ಮಾತನಾಡಿದ ಉದಯ್ ಆಚಾರ್ಯ ಎಂಬವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕುರಿತು ಮಂಗಳೂರು ನಗರ ದಕ್ಷಿಣ ಬಿಜೆಪಿ ಯುವ ಮೋರ್ಚಾವು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿತು.
ಇಡೀ ದೇಶವೇ ಒಕ್ಕೊರಲಿನಿಂದ ಭಯೋತ್ಪಾದಕರ ಕೃತ್ಯವನ್ನು ಖಂಡಿಸಬೇಕಿರುವ ಈ ಸಂದರ್ಭದಲ್ಲಿಯೂ ಕೊಳಕು ಮನಸ್ಥಿತಿ ಪ್ರದರ್ಶಿಸಿರುವುದು ದುರದೃಷ್ಟಕರವಾಗಿದ್ದು ಕೂಡಲೇ ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಯುವ ಮೋರ್ಚಾ ಪೊಲೀಸ್ ಆಯುಕ್ತರನ್ನು ಆಗ್ರಹಿಸಿತು.
ಈ ಸಂದರ್ಭದಲ್ಲಿ ಮಂಡಲದ ಯುವ ಮೋರ್ಚಾ ಅಧ್ಯಕ್ಷರಾದ ಅಶ್ವಿತ್ ಕೊಟ್ಟಾರಿ, ರಿತ್ವಿಕ್ ಕದ್ರಿ, ಮೌನೀಶ್ ಚೌಟ, ಚರಿತ್ ಪೂಜಾರಿ, ಸುಶಾಂತ್ ಪೂಜಾರಿ, ಪ್ರೀತಂ ಅಂಚನ್, ಶಶಾಂಕ್ ಆಚಾರ್ಯ, ಸೋಹನ್ ಜೆಪ್ಪಿನಮೊಗರು ಸೇರಿದಂತೆ ಯುವ ಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.

