ಮಂಗಳೂರು: ಅವಾಚ್ಯ ಶಬ್ದ ಬಳಕೆ ವಿಚಾರದಲ್ಲಿ ರಸ್ತೆ ಮಧ್ಯೆ ಬೈಕ್ ಸವಾರರು ಸಾರ್ವಜನಿಕರ ಮುಂದೆ ಹೊಡೆದಾಡಿಕೊಂಡ ಘಟನೆ ನಗರದ ಮಹಾಕಾಳಿಪಡ್ಪು ರೈಲ್ವೆ ಗೇಟ್ ಬಳಿ ನಡೆದಿದೆ.

ಅವಾಚ್ಯ ಶಬ್ದ ಬಳಕೆ ವಿಚಾರದಲ್ಲಿ ಬೈಕ್ ಸವಾರರ ಮಧ್ಯೆ ಗಲಾಟೆ ನಡೆದಿದೆ ಎನ್ನಲಾಗಿದೆ. ಕೆಲ ನಿಮಿಷಗಳ ಕಾಲ ರೈಲ್ವೆ ಗೇಟ್ ನಲ್ಲಿ ನಿಂತಿದ್ದ ವಾಹನ ಸವಾರರಿಗೆ ಪುಕ್ಕಟೆ ಮನರಂಜನೆ ಸಿಕ್ಕಿದೆ, ಸ್ಥಳೀಯರು ಮಧ್ಯೆ ಪ್ರವೇಶಿಸಿ ಇಬ್ಬರನ್ನು ಸಮಾಧಾನಪಡಿದ್ದಾರೆ.