ಮಂಗಳೂರು: ಲಾರಿಗೆ ಡಿಕ್ಕಿ ಆಗುವುದನ್ನು ತಪ್ಪಿಸಲು ಹೋಗಿ ಬೈಕ್ ಅಪಘಾತವಾಗಿದ್ದು ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಯೆಯ್ಯಾಡಿಯ ಹರಿಪದವುನಲ್ಲಿ ನಡೆದಿದೆ.
ಉಪ್ಪಿನಂಗಡಿಯ ಚೇತನ್ (24) ಹಾಗೂ ಕೋಡಿಕಲ್ನ ಕಾಶೀನಾಥ್(17) ಮೃತ ದುರ್ದೈವಿಗಳು. ರಾತ್ರಿ ವೇಳೆ ಯೆಯ್ಯಾಡಿ ಸಮೀಪದ ಹರಿಪದವು ಬಳಿಯ ರಸ್ತೆಯಲ್ಲಿ ಲಾರಿ ಹಿಂದಕ್ಕೆ ತೆಗೆದುಕೊಳ್ಳಲಾಗುತ್ತಿತ್ತು. ಇದೇ ವೇಳೆ ಅದೇ ರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ಯುವಕರು ತಮ್ಮ ಬೈಕ್ ಅನ್ನು ಲಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿದ್ದಾರೆ.
ಆದರೆ ಈ ವೇಳೆ ನಿಯಂತ್ರಣ ತಪ್ಪಿದ ಬೈಕ್ ರಸ್ತೆಗೆ ಬಿದ್ದು ಹಾಗೇ ಜಾರಿಕೊಂಡು ಹೋಗಿದೆ. ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

