ಬೆಳ್ತಂಗಡಿ: ಇಂದು ಬೆಳಗ್ಗೆ ಬೆಳ್ತಂಗಡಿ ಪೊಲೀಸ್ ವ್ರತ್ತ ನಿರೀಕ್ಷರ ಕಚೇರಿ ಗೆ ಭೇಟಿ ನೀಡಿ ಅಪಘಾತ ಮಾಡಿ ಅಮಾಯಕ ಹುಡುಗಿ ಅನರ್ಘ್ಯ ಸಾವಿಗೆ ಕಾರಣರಾದ ಮತ್ತು ಗುರುಪ್ರಸಾದ್ ಗೋಖಲೆ ಯವರಿಗೆ ತೀವ್ರವಾದ ಏಟು ಆಗಲು ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಂಡು ನ್ಯಾಯ ಒದಗಿಸಿ ಕೊಡಬೇಕು ಎಂದು ಚಿತ್ಪಾವಾನ ಸಮಾಜದ ವತಿಯಿಂದ  ಮನವಿ ಸಲ್ಲಿಸಲಾಯಿತು.

ಈ ಬಗ್ಗೆ ಸಮಸ್ತ ಚಿತ್ಪಾವಾನ ಸಮಾಜ ದುಃಖ ತಪ್ತ ವಾಗಿದೆ. ಭಯಭೀತ ರಾಗಿದ್ದೇವೆ ಎಂದು ತಿಳಿಸಲಾಯಿತು. ಇದಕ್ಕೆ ಉತ್ತರವಾಗಿ ಪೊಲೀಸ್ ಇಲಾಖೆ ಯವರು ಈ ಪ್ರಕರಣ ವನ್ನು ನಾವು ಗಂಭೀರ ವಾಗಿ ಪರಿಗಣಿಸಿದ್ದೇವೆ. ಸಂಬಂಧ ಪಟ್ಟವರ ನ್ನು ಬಂಧಿಸಿದ್ದೇವೆ. ಈ ಪ್ರಕರಣ ವನ್ನು ಮೋಟಾರ್ ಆಕ್ಸಿಡೆಂಟ್ case ಮಾಡದೆ ಉದ್ದೇಶ ರಹಿತ ಕೊಲೆ ಎಂದು ದಾಖಲಿಸಿದ್ದೇವೆ. ಇದು ಇನ್ನು ಕಠಿಣ ಕಾನೂನು. ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಅದೇ ರೀತಿ ತಾಲೂಕು ತಹಸೀಲ್ದಾರ್ ಅವರನ್ನು ಭೇಟಿಯಾಗಿ. ಅಪಘಾತಕ್ಕೆ ಇಡಾಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀ ಗುರುಪ್ರಸಾದ್ ಗೋಖಲೆ ಯವರು ಆರ್ಥಿಕ ವಾಗಿ ಸಮಸ್ಯೆ ಯನ್ನು ಹೊಂದಿದವರು ಆಗಿದ್ದು ಅವರಿಗೆ ಸರಕಾರ ದಿಂದ ದೊರೆಯುವ ಸಹಾಯ ವನ್ನು ದೊರಕಿಸಿ ಕೊಡಬೇಕಾಗಿ ವಿನಂತಿಕೊಂಡಿದ್ದಾರೆ.

Update

ಪ್ರಕರಣದ ಹಿನ್ನೆಲೆ:
ಬೊಲೆರೊ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ತಂದೆಯ ಜೊತೆ ಹೋಗುತ್ತಿದ್ದ ಬಾಲಕಿ ಮೃತಪಟ್ಟು, ಬೈಕ್‌ ಚಾಲಕ ಗಾಯಗೊಂಡ ಘಟನೆ ಮುಂಡಾಜೆಯ ಸೀಟು ಬಳಿ ಶನಿವಾರ ಸಂಜೆ ಸಂಭವಿಸಿದೆ. ಮುಂಡಾಜೆ ಕಲ್ಮಂಜ ನಿವಾಸಿ ಗುರುಪ್ರಸಾದ್ ಗೋಖಲೆ ಹಾಗೂ ಅವರ ಮಗಳು ಅನರ್ಘ್ಯ (9) ಉಜಿರೆಯಿಂದ ಮನೆಗೆ ಹೊರಟಿದ್ದರು. ಈ ವೇಳೆ ಬೊಲೆರೊ ಹಿಂದಿನಿಂದ ಢಿಕ್ಕಿ ಹೊಡೆದು ಬಳಿಕ ವಾಹನವನ್ನು ನಿಲ್ಲಿಸದೆ ಪರಾರಿಯಾಗಿತ್ತು.
ಗಾಯಗೊಂಡಿದ್ದ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಅನರ್ಘ್ಯ ಮೃಪಟ್ಟಿರುವುದಾಗಿ ತಿಳಿದುಬಂದಿದೆ. ಅನರ್ಘ್ಯ ಉಜಿರೆ ಎಸ್‌ಡಿಎಂ ಶಾಲೆಯ 4 ನೇ ತರಗತಿ ವಿದ್ಯಾರ್ಥಿನಿ.

ಅಪಘಾತವಾದ ಬಳಿಕ ತಪ್ಪಿಸಿಕೊಂಡಿದ್ದ ಬೊಲೆರೊ ವಾಹನವನ್ನು ಸಾರ್ವಜನಿಕರ ಸಹಕಾರದಿಂದ ಪತ್ತೆ ಹಚ್ಚಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.