ಮಂಗಳೂರು : ಭಾರತೀಯ ವೈದ್ಯ ಪದ್ಧತಿಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಆದ್ಯತೆ ನೀಡಲಾಗಿದೆ, ಶಾಸ್ತ್ರೀಯ ಹಾಗೂ ವೈಜ್ಞಾನಿಕ ಆಯುಷ್ ಪದ್ಧತಿಗಳ ಉನ್ನತ ಮೌಲ್ಯಗಳ ಸಂಗಮ ಆಯುಷ್ ಹಬ್ಬದಲ್ಲಿ ಮೂಡಿಬರಲಿದೆ.
ಆಧುನಿಕ ಜೀವನ ಜೀವನ ಶೈಲಿಯಲ್ಲಿ ಕಂಡುಬರುವ ರೋಗಗಳಿಗೆ ಕಾರಣವಾಗುವ ಅಂಶಗಳನ್ನು ಗುರುತಿಸಿ ಅವುಗಳ ನಿಯಂತ್ರಣ ಸಾಧಿಸಲು ಸೂಕ್ತ ಸಲಹೆ, ಮತ್ತು ಅಯುಷ್ ಚಿಕಿತ್ಸಾ ಕ್ರಮಗಳು ಏನೇನಿವೆ, ಎಲ್ಲಿ ಲಭ್ಯವಿದೆ ಎಂಬು ಸಂಪೂರ್ಣ ಮಾಹಿತಿಯನ್ನು ಪಡೆಯಲು ಸಾಧ್ಯ. ಅಲ್ಲದೆ ಹಲವು ಚಿಕಿತ್ಸಾ ಉಪಕ್ರಮಗಳು ಲಭ್ಯವಿದೆ ಹಾಗು ಸಾರ್ವಜನಿಕರ ಸ್ವಾಸ್ಥ್ಯ ಸಂರಕ್ಷಣೆಯ ದೃಷ್ಟಿಯಿಂದ ಆಯುಷ್ ಹಬ್ಬ 2026ನ್ನು ಆಯೋಜಿಲಜಿಸಲಾಗುತ್ತಿದೆ.
ಅಯುಷ್ ಹಬ್ಬ ಸಮಿತಿ2026, ವಿವಿಧ ಆಯುಷ್ ಕಾಲೇಜುಗಳು, ಸಂಘಟನೆಗಳು ಮತ್ತು ವೃತ್ತಿನಿರತ ವೈದ್ಯರ ಸಹಭಾಗಿತ್ವದಲ್ಲಿ ಮಂಗಳೂರು ನಗರದ ಡಾ ಟಿ ಎಂ ಎ ಪೈ ಇಂಟರ್ನ್ಯಾಷನಲ್ ಕನ್ವೆನ್ಸನ್ ಸೆಂಟರ್ ನಲ್ಲಿ ಜನವರಿ31 ಮತ್ತು ಫೆಬ್ರವರಿ 1ರಂದು ಎರಡು ದಿನಗಳ ಕಾಲ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಸುಮಾರು5000 ವೈದ್ಯರು, 10000ಆಯುಷ್ ವೈದ್ಯ ವಿದ್ಯಾರ್ಥಿಗಳು, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು, 20000ಕ್ಕೂ ಅಧಿಕ ಸಾರ್ವಜನಿಕರು ಭೇಟಿ ನೀಡಬಹುದೆಂದು ಅಂದಾಜಿಸಲಾಗಿದೆ.ಇದರಲ್ಲಿ ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ,ಮತ್ತು ಹೋಮಿಯೋಪತಿ ವೈದ್ಯಕೀಯ ಸೇವೆಗಳ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಸಂಘಟಕರಾದ ಆಶಾ ಜ್ಯೋತಿ ರೈ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನ ನೀಡಿದರು.

