ಮಂಗಳೂರು: ಮತಗಳವು ವಿರುದ್ಧ ಮಂಗಳೂರಿನ ವಿವಿಧೆಡೆಗಳಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಿ ಸಹಿ ಅಭಿಯಾನ ನಡೆಸಲಿದ್ದೇವೆ ಎಂದು ಎಂಎಲ್‌ಸಿ ಐವನ್ ಡಿಸೋಜ ಹೇಳಿದರು.

ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಮತಗಳ್ಳತನ ವಿರುದ್ಧ ರಾಹುಲ್ ಗಾಂಧಿಯವರ ಹೋರಾಟಕ್ಕೆ ದ‌.ಕ.ಜಿಲ್ಲೆಯಿಂದಲೂ ಬೆಂಬಲ ವ್ಯಕ್ತಪಡಿಸಿದ್ದೇವೆ‌. ಜಿಲ್ಲೆಯಲ್ಲಿ 1868 ಬೂತ್‌ಗಳಿವೆ. ಪ್ರತೀ ಬೂತ್‌ಗಳಲ್ಲಿ ಸಹಿ ಅಭಿಯಾನ ನಡೆಸುವ ಯೋಜನೆ ಹಾಕಿಕೊಂಡಿದ್ದೇವೆ. ಈ ಮೂಲಕ‌ ಪ್ರತೀ ಬೂತ್‌ಗಳಲ್ಲಿ ನೂರು ಅಥವಾ ಅದಕ್ಕಿಂತ ಹೆಚ್ಚಿನ ಸಹಿ ಪಡೆದು ಮತಗಳವು ಮೂಲಕ ಅಧಿಕಾರ ಪಡೆದವರು, ಅಧಿಕಾರ ಬಿಟ್ಟು ತೆರಳಿ‌ ಅಭಿಯಾನ ನಡೆಸಲಿದ್ದೇವೆ. ಈ ಮೂಲಕ 1.80ಲಕ್ಷದಷ್ಟು ಸಹಿ ಸಂಗ್ರಹದ ಯೋಜನೆ ಹಾಕಿಕೊಂಡಿದ್ದೇವೆ ಎಂದರು.

ಅ.13-14ರಂದು ಮಂಗಳೂರಿನ ವಿವಿಧೆಡೆ ಮತಗಳವು ವಿರುದ್ಧ ಕಾರ್ಯಕ್ರಮ ಆಯೋಜಿಸಿ ಸಹಿ ಸಂಗ್ರಹ ಕಾರ್ಯ ನಡೆಸಲಿದ್ದೇವೆ. ಅಕ್ಟೋಬರ್ 13ರಂದು 4ಗಂಟೆಗೆ ಉರ್ವ ಜಂಕ್ಷನ್, 5ಗಂಟೆಗೆ ಉರ್ವಸ್ಟೋರ್, 6.30ಗಂಟೆಗೆ ಕುದ್ರೋಳಿಯಲ್ಲಿ ಅ.14ರಂದು 3ಗಂಟೆಗೆ ಶಕ್ತಿನಗರ, 4.30ಗೆ ಬಿಕರ್ನಕಟ್ಟೆ, 6ಗಂಟೆಗೆ ಕದ್ರಿ ಮಾರುಕಟ್ಟೆಯಲ್ಲಿ ಈ ಕಾರ್ಯಕ್ರಮ ನಡೆಸಿ ಮತಗಳವು ಬಗ್ಗೆ ಜಾಗೃತಿ ಮೂಡಿಸಿ ಸಹಿ ಅಭಿಯಾನ ನಡೆಸಲಿದ್ದೇವೆ‌ ಎಂದರು.

ಮಂಗಳೂರಿನಲ್ಲೂ ಮತಗಳವು ನಡೆದಿರುವ ಅನುಮಾನವಿದ್ದು, ಕೆಲವೊಂದು ಕಡೆಗಳಲ್ಲಿ ಶಾಪ್‌, ಅಂಗಡಿಗಳಿಗೂ ಡೋರ್‌ನಂಬರ್ ನೀಡಿ ಮತ ಚಲಾಯಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಕೆಲವೊಂದು ಕಡೆಗಳಲ್ಲಿ ಒಂದೇ ಡೋರ್ ನಂಬರ್‌ನಲ್ಲಿ 30-35 ಜನರು ಮತಪಟ್ಟಿಯಲ್ಲಿ ಹೆಸರು ನೋಂದಾಯಿಸಿದ್ದಾರೆ. ಈ ಬಗ್ಗೆ ತನಿಖೆಗೆ ಐವನ್ ಡಿಸೋಜ ಒತ್ತಾಯಿಸಿದರು.