ಮಂಗಳೂರು : ಬೆಳ್ತಂಗಡಿಯಲ್ಲಿ ಬೀಗ ಹಾಕಿದ ಮನೆಗೆ ಕಳ್ಳತನಕ್ಕೆ ಯತ್ನ ನಡೆಸಿರುವ ಘಟನೆ ನಡೆದಿದೆ. ಕಳ್ಳತನಕ್ಕೆ ಯತ್ನಿಸುವಾಗ ಸಿಸಿ ಟಿವಿ ಯ ದೃಶ್ಯ ಮಾಲಕರ ಮೊಬೈಲ್ನಲ್ಲಿ ಕಂಡು ಸ್ಥಳೀಯರಿಗೆ ಮಾಹಿತಿ ನೀಡಲಾಯಿತು.
ಸ್ಥಳೀಯರು ಬಂದು ನೋಡಿದಾಗ ವ್ಯಕ್ತಿ ಓರ್ವ ಕಬ್ಬಿಣದ ರಾಡ್ ಹಿಡಿಕೊಂಡು ಇದ್ದನು. ಸ್ಥಳೀಯರನ್ನ ನೋಡಿ ಓಡಲು ಕಳ್ಳ ಯತ್ನಿಸಿದ್ದಾನೆ. ಹಿಡಿಯಲು ಪ್ರತ್ನಿಸಿದಾಗ ಹಲ್ಲೆಗೆ ನಡೆಸಲು ಮುಂದಾಗಿದ್ದಾನೆ.
ಅನೇಕರು ಸೇರಿ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಯಿತು. ವಿಚಾರಣೆ ಸಂದರ್ಭ ಕೇರಳ ತಲಪಾಡಿ ನಿವಾಸಿ ಕಿರಣ್ ಎಂದು ತಿಳಿದು ಬಂದಿದೆ. ಅಲ್ಲದೆ ಒಟ್ಟು 13 ಪ್ರಕರಣದ ಸರದಾರನಾಗಿದ್ದಾನೆ.

