ಮಂಗಳೂರು : ಜಡ್ಜ್ ಮುಂದೆಯೇ ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪುತ್ತೂರಿನ 5ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ನಡೆದಿದೆ.
ಪುತ್ತೂರಿ ಕಾವು ಮಣಿಯಡ್ಕ ನಿವಾಸಿ ರವಿ (35) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ರವಿ ಹಾಗೂ ಆತನ ಪತ್ನಿ ವಿದ್ಯಾಶ್ರೀ ನಡುವೆ ಕಲಹ ನಡೆದಿದೆ. ಎರಡು ದಿನಗಳ ಹಿಂದೆ ವಿದ್ಯಾಶ್ರೀ ಅವರ ಕುತ್ತಿಗೆ ಹಿಸುಕಿ ರವಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಗಂಡ-ಹೆಂಡತಿ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
ಸಂಪ್ಯ ಗ್ರಾಮಾಂತರ ಠಾಣೆಯಲ್ಲಿ ಇಂದು ಕೇಸ್ ದಾಖಲಾಗುವ ಸಾಧ್ಯತೆ ಇತ್ತು. ಹಾಗಾಗಿ ಇಬ್ಬರ ನಡುವೆ ವಿಚ್ಛೇದನದ ಮಾತುಕತೆ ನಡೆದಿತ್ತು. ಸಂಪ್ಯ ಠಾಣೆಗೆ ಹಾಜರಾಗಲು ಇಂದು ರವಿಯನ್ನ ಪೊಲೀಸರು ತಿಳಿಸಿದ್ದರು. ಈ ನಡುವೆ ರವಿ ನೇರವಾಗಿ ಪುತ್ತೂರು ನ್ಯಾಯಾಲಯದ ಆವರಣಕ್ಕೆ ಬಂದು ಜಡ್ಜ್ ಮುಂದೆ ವಿಷ ಸೇವನೆ ಮಾಡಿದ್ದಾರೆ.
ವಿಷ ಸೇವನೆ ಬಳಿಕ ರವಿ ನ್ಯಾಯಾಲಯದಲ್ಲಿಯೇ ವಾಂತಿ ಮಾಡಿದ್ದಾನೆ. ತಕ್ಷಣ ಎಚ್ಚೆತ್ತ ಅಲ್ಲಿನವರು ವ್ಯಕ್ತಿಯನ್ನ ಪುತ್ತೂರು ಸರ್ಕಾರಿ ಆಸ್ಪತ್ರಗೆ ರವಾನೆ ಮಾಡಲಾಗಿದೆ. ಗೇರು ತೋಟಕ್ಕೆ ಸಿಂಪಡಿಸುವ ಕೀಟನಾಶಕವನ್ನ ವ್ಯಕ್ತಿ ಸೇವಿಸಿದ್ದಾರೆ. ಎಂಡೋಸಲ್ಫಾನ್ ಬ್ಯಾನ್ ಆದ ಬಳಿಕ ಮಾರುಕಟ್ಟೆಯಲ್ಲಿ ಸಿಗುವ ‘ಕರಾಟೆ’ ಕೀಟನಾಶಕವಾಗಿದೆ.
ಕರಾಟೆ ಕೀಟನಾಶಕವನ್ನ ಸೇವಿಸಿದ ರವಿ ಸ್ಥಿತಿ ಗಂಭೀರವಾಗಿದೆ. ರವಿಯನ್ನ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿನಿಂದ ಮಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆತ್ಯಹತ್ಯೆ ಯತ್ನದ ಬಳಿಕ ದಂಪತಿ ಒಂದಾಗಿದ್ದಾರೆ. ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ಒಂದೇ ಆಂಬ್ಯುಲೆನ್ಸ್ ನಲ್ಲಿ ದಂಪತಿ ತೆರಳಿದ್ದಾರೆ.

