ಪುತ್ತೂರು: ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾಮಟ್ಟದ ವಿವಿಧ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ನಗರದ ನಟ್ಟೋಜ ಫೌಂಡೇಶನ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯ ವಿದ್ಯಾರ್ಥಿಗಳು ಪ್ರಶಸ್ತಿ ಬಾಚಿಕೊಂಡಿದ್ದಾರೆ.

10ನೇ ತರಗತಿ ವಿದ್ಯಾರ್ಥಿನಿ ಹಿತಾಲಿ ಪ್ರಸನ್ನ ಶೆಟ್ಟಿ 17 ವಯೋಮಾನದ ಈಟಿ ಎಸೆತದಲ್ಲಿ ಪ್ರಥಮ, ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದರೆ, 10ನೇ ತರಗತಿಯ ಅವನಿ ಯು. ಗುಂಡು ಎಸೆತದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. 9ನೇ ತರಗತಿಯ ತನ್ವಿ ಎ ರೈ ತ್ರಿವಿಧಜಿಗಿತದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. 14 ವಯೋಮಾನದ ವರ್ಗದಲ್ಲಿ 8ನೇ ತರಗತಿಯ ದೃಶಾನ ಸುರೇಶ್ ಸರಳಿಕಾನ 100 ಮೀಟರ್ ಮತ್ತು 200 ಮೀಟರ್ ಓಟದಲ್ಲಿ ದ್ವಿತೀಯ, ಉದ್ದ ಜಿಗಿತ ಪ್ರಥಮ, 4×100 ರಿಲೇ ದ್ವಿತೀಯ ಸ್ಥಾನಕ್ಕೆ ಭಾಜನರಾದರೆ 9ನೇ ತರಗತಿಯ ಲಾಸ್ಯ ಸಂತೋಷ್ ಚಕ್ರ ಎಸೆತದಲ್ಲಿ ದ್ವಿತೀಯ, 8ನೇ ತರಗತಿಯ ಬಿ. ತ್ರಿಶಾ ಉದ್ದ ಜಿಗಿತ ತೃತೀಯ ಹಾಗೂ 4×100 ರಿಲೇಯಲ್ಲಿ ದ್ವಿತೀಯ ಸ್ಥಾನ ಗಳೀಸಿದ್ದಾರೆ. 8ನೇ ತರಗತಿಯ ಅದಿತಿ ಎನ್ ಶೆಟ್ಟಿ 4*100 ರಿಲೇ ದ್ವಿತೀಯ ಹಾಗೂ 7ನೇ ತರಗತಿಯ ಪೂರ್ವಿ ವಿ. 4×100 ರಿಲೇಯಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.