ಮಂಗಳೂರು: ನಗರದ ಜಪ್ಪಿನಮೊಗರು ಪ್ರಜ್ಞಾ ಸ್ವಾಧಾರ ಕೇಂದ್ರದಲ್ಲಿದ್ದ ಬೆಂಗಳೂರಿನ ಉತ್ತರಹಳ್ಳಿ ನಿವಾಸಿಗಳಾದ ರಾಣಿ (26), ಸೋನಿಯಾ(19) ಹಾಗೂ ವಾರಸುದಾರರಿಲ್ಲದೇ ತಿರುಗಾಡುತ್ತಿದ್ದ ಕೊಲ್ಕತ್ತ ಮೂಲದ ನರ್ಗಿಸ್ (35) ಎಂಬವರು 2019 ರ ಫೆಬ್ರವರಿ 4 ರಂದು ಪ್ರಜ್ಞಾ ಸ್ವಾಧಾರ ಕೇಂದ್ರದ ಹಿಂಬದಿಯಿಂದ ಓಡಿ ಹೋಗಿದ್ದು, ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಾಣೆಯಾದವರ ಚಹರೆ ರಾಣಿ- ಎತ್ತರ 152 ಸೆ.ಮೀ., ಗೋಧಿ ಮೈ ಬಣ್ಣ , ಕಪ್ಪು ಕೂದಲು, ದುಂಡು ಮುಖ, ದಪ್ಪ ಶರೀರ. ಕಾಣೆಯಾದ ದಿನ ಕೇಸರಿ ಬಣ್ಣದ ಪ್ಯಾಂಟ್ ಹಾಗೂ ಶಾಲ್ ಹೊಂದಿರುವ ಚೂಡಿದಾರ ಧರಿಸಿದ್ದರು. ಕನ್ನಡ, ಹಿಂದಿ ಭಾಷೆ ಮಾತನಾಡುತ್ತಾರೆ.

ಸೋನಿಯಾ – ಎತ್ತರ 135 ಸೆ.ಮೀ., ಸಾಧಾರಣ ಶರೀರ, ಬಿಳಿ ಮೈಬಣ್ಣ, ಕಪ್ಪು ಕೂದಲು, ಕೋಲು ಮುಖ ಹೊಂದಿರುತ್ತಾರೆ. ಕಾಣೆಯಾದ ದಿನ ನೀಲಿ ಬಣ್ಣದ ಚೂಡಿದಾರ ಧರಿಸಿದ್ದರು. ಕನ್ನಡ ಭಾಷೆ ಮಾತನಾಡುತ್ತಾರೆ.
ನರ್ಗಿಶ್- ಎತ್ತರ 135 ಸೆ.ಮೀ., ಸಾಧಾರಣ ಶರೀರ, ಕಪ್ಪು ಮೈ ಬಣ್ಣ, ದುಂಡು ಮುಖ ಹೊಂದಿರುತ್ತಾರೆ. ಕಾಣೆಯಾದ ದಿನ ಗುಲಾಬಿ ಬಣ್ಣದ ಚೂಡಿದಾರ ಧರಿಸಿದ್ದರು. ಹಿಂದಿ ಭಾಷೆ ಮಾತನಾಡುತ್ತಾರೆ. ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

