ಮಂಗಳೂರು : ತುಳು ಯಕ್ಷಗಾನ ಪ್ರಸಂಗಗಳ ಭೀಷ್ಮ ಎಂದು ಖ್ಯಾತರಾಗಿದ್ದ ಕೆ.ಅನಂತರಾಮ ಬಂಗಾಡಿ ಅವರ ಸಂಸ್ಮರಣಾ ಗೋಷ್ಠಿ ಹಾಗೂ ತುಳು ಯಕ್ಷಗಾನ ಪ್ರದರ್ಶನ ಜ.11 ರಂದು ಮಧ್ಯಾಹ್ನ 3.00 ಕ್ಕೆ ಮಂಗಳೂರು ಉರ್ವಸ್ಟೋರಿನ ತುಳು ಭವನದಲ್ಲಿ ನಡೆಯಲಿದೆ.
ಹಿರಿಯ ಯಕ್ಷಗಾನ ಕಲಾವಿದರಾದ ಕೊಳ್ತಿಗೆ ನಾರಾಯಣ ಗೌಡ ಅವರು ‘ತುಳು ಯಕ್ಷಗಾನ ಪ್ರಸಂಗಗಳಿಗೆ ಅನಂತರಾಮ ಬಂಗಾಡಿ ಅವರ ಕೊಡುಗೆ’ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸುವರು.
ಕಾರ್ಯಕ್ರಮದಲ್ಲಿ ಮ್ಯಾಪ್ಸ್ ಕಾಲೇಜಿನ ಉಪಪ್ರಾಂಶುಪಾಲರಾದ ಡಾ.ಪ್ರಭಾಕರ ನೀರುಮಾರ್ಗ , ಮರೋಳಿ ಶ್ರೀ ಸೂರ್ಯ ನಾರಾಯಣ ದೇವಸ್ಥಾನದ ಟ್ರಸ್ಟಿ ಶ್ರೀಮತಿ ವೇಣಿ ಮರೋಳಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ವಿಚಾರಗೋಷ್ಠಿಯ ಬಳಿಕ ಯಕ್ಷ ಪ್ರತಿಭೆ ಸಂಸ್ಥೆಯ ಸಂಚಾಲಕ ಸಂಜಯ್ ಕುಮಾರ್ ಗೋಣಿಬೀಡು ಅವರ ಸಂಯೋಜನೆಯಲ್ಲಿ ‘ಸಿರಿಕೃಷ್ಣೆ-ಚಂದ್ರಪಾಲಿ’ ತುಳು ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

