ಸುಳ್ಯ : ತಾಲೂಕಿನ ಮಂಡೆಕೋಲು ಗ್ರಾಮದ ಕಲ್ಲಡ್ಕ ನಿವಾಸಿಯಾದ ಬಾಲಕೃಷ್ಣ ಮಣಿಯಾಣಿ ಮತ್ತು ಪುಷ್ಪವತಿ ದಂಪತಿಗಳ ಪುತ್ರಿಯಾದ ಕೀರ್ತಿಕಾ ಪಿ. ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ ಕಾಲೇಜಿನಲ್ಲಿ ಅಂತಿಮ ವರ್ಷದ B.sc Botany and Zoology ಪರೀಕ್ಷೆಯಲ್ಲಿ 93% ಫಲಿತಾಂಶವನ್ನು ಪಡೆದಿರುತ್ತಾರೆ.
ಸುಳ್ಯ ತಾಲೂಕು ಜಯನಗರ ಕೊರಂಬಡ್ಕ ನಿವಾಸಿಯಾದ ರಾಜೇಶ್ ಸಾಲಿಯಾನ್ ಹಾಗೂ ತೇಜಸ್ವಿನಿ ದಂಪತಿಗಳ ಪುತ್ರಿಯಾದ ಕು. ಸುಪ್ರಿಯ ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ ಕಾಲೇಜಿನಲ್ಲಿ ಅಂತಿಮ ವರ್ಷ Mathematics and Computer Science ಪರೀಕ್ಷೆಯಲ್ಲಿ 89% ಫಲಿತಾಂಶ ಪಡೆದಿರುತ್ತಾರೆ.

ಇವರು ಪ್ರಸ್ತುತ ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು ಇಲ್ಲಿ ಅತಿಥಿ ಶಿಕ್ಷಕಿಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಸಾಧನೆಗೆ ಸಂಸ್ಥೆಯ ಸಂಚಾಲಕರಾದ ಗೋಕುಲ್ನಾಥ್ ಪಿ.ವಿ. ಇವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

