ಕಟೀಲು: ಪ್ರತಿ ಹುಟ್ಟಿನ ಹಿಂದಿರುವ ರಹಸ್ಯವನ್ನು ತಿಳಿಯಲು ಆತ್ಮ ಜ್ಞಾನಿ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರ ‘ಆತ್ಮ-ಪರಮಾತ್ಮʼ ಜೀವನದ ಸತ್ಯ ದರ್ಶನ.. ಒಳ ಚಿಂತನ ಶಿಬಿರವು ಅ. 23 ರಂದು ಆದಿತ್ಯವಾರ ಬೆಳಗ್ಗೆ 9.30 ಕ್ಕೆ ಶ್ರೀ ಗೋಪಾಲಕೃಷ್ಣ ಅಸಣ್ಣ ಸಭಾಭವನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ನಡೆಯಲಿದೆ.
ಅಧ್ಯಾತ್ಮ ಜಾಗೃತಿ ಎಂದರೆ ಕೇವಲ ಪೂಜೆ ಪುನಾಸ್ಕಾರಗಳಲ್ಲ. ಬದಲಾಗಿ ನಮ್ಮ ನೈಜ ಸ್ವರೂಪ, ಅಂತರಾತ್ಮ ಮತ್ತು ದೈವೀಕತೆಯ ಬಗ್ಗೆ ಜಾಗೃತರಾಗುವ ಪ್ರಕ್ರಿಯೆ. ಇದು ಭೌತಿಕ ಜಗತ್ತಿನ ಭ್ರಮೆಗಳನ್ನು ಮೀರಿ, ಆತ್ಮ ಸಾಕ್ಷಾತ್ಕಾರದ ಕಡೆಗೆ ಸಾಗುವ ಮಾರ್ಗವಾಗಿದೆ.
ಈ ಕಾರ್ಯಕ್ರಮದ ಪ್ರಯೋಜನಗಳೆಂದರೆ ಆಧ್ಯಾತ್ಮಿಕತೆಯು ‘ನಾನು ಯಾರು?’ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತದೆ. ಇದು ಕೇವಲ ದೇಹವಲ್ಲ, ಬದಲಾಗಿ ಆತ್ಯದ ಅಸ್ತಿತ್ವವನ್ನು ಗುರುತಿಸುವುದಾಗಿದೆ. ಇದು ನಮ್ಮ ಅಲೋಚನೆಗಳು, ಭಾವನೆಗಳು ಮತ್ತು ಲೌಕಿಕ ವಿಷಯಗಳಿಗಿಂತ ಮಿಗಿಲಾದ ಜಾಗೃತಿಯನ್ನು ಹೊಂದುವುದಾಗಿದೆ. ಸ್ಥಿತಪ್ರಜ್ಞತೆಯತ್ತ ಹೆಜ್ಜೆ ಇಡುವುದು ಅಧ್ಯಾತ್ಮಿಕ ಜಾಗೃತಿ.
ಅಧ್ಯಾತ್ಮ ಕೇವಲ ಜ್ಞಾನಿಗಳಿಗೆ ಸೀಮಿತವಲ್ಲ. ದೈನಂದಿನ ಒತ್ತಡ, ಆತಂಕ ಮತ್ತು ಭಿನ್ನತೆಯನ್ನು ಮೀರಿ. ನೆಮ್ಮದಿ ಮತ್ತು ಶಾಂತಿಯುತ ಜೀವನ ನಡೆಸಲು ದಾರಿದೀಪವಾಗಲಿದೆ. ಇದು ನಮ್ಮಲ್ಲಿರುವ ದೈವಿಕತೆಯನ್ನು, ಸಕಾರಾತ್ಮಕತೆಯನ್ನು ಜಾಗೃತಗೊಳಿಸುವ ಪ್ರಕ್ರಿಯೆ. ಆಧ್ಯಾತ್ಮಿತತೆಯು ಸಾರ್ವರಿತವಾಗಿದ್ದು, ಜಾತಿ, ಭೇದವಿಲ್ಲದೆ ಪ್ರತಿಯೊಬ್ಬರೂ ಅಭ್ಯಸಿಸಬಹುದಾದ ಜ್ಞಾನ ಮಾರ್ಗವಾಗಿದೆ. ಸಾಧನೆ, ಸೇವೆ ಮತ್ತು ಪ್ರೀತಿಯ ಮೂಲಕ ಆಧ್ಯಾತ್ಮಿಕ ಜಾಗೃತಿ ಸಾಧ್ಯ.

