ಮಂಗಳೂರು : ಮಹಾನಗರಪಾಲಿಕಾ ವ್ಯಾಪ್ತಿಯಲ್ಲಿ ಅಮೃತ್ ಮಿತ್ರ 2.0 ಯೋಜನೆಯಡಿಯಲ್ಲಿ ತಾಯಿಯ ಹೆಸರಿನಲ್ಲಿ ಒಂದು ಗಿಡ- ಕಾರ್ಯಕ್ರಮಕ್ಕೆ ಜೂ. 05 ರಂದು ವಿಶ್ವ ಪರಸರ ದಿನದ ಪ್ರಯುಕ್ತ ಬಜಾಲ್ ಜಲ ತ್ಯಾಜ್ಯ ನಿರ್ವಹಣಾ ಘಟಕ ಪರಿಸರದಲ್ಲಿ ಡೇ-ನಲ್ಮ್ ಸ್ವಸಹಾಯ ಸಂಘದ ಮಹಿಳೆಯರ ಮೂಲಕ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಶ್ರೀ ರವಿಚಂದ್ರ ನಾಯಕ್, ಕೆ.ಎ.ಎಸ್., ಆಯುಕ್ತರು, ಮಂಗಳೂರು ಮಹಾನಗರಪಾಲಿಕೆ ಇವರು ಗಿಡ ನೆಡುವ ಮೂಲಕ ಚಾಲನೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, ಅಮೃತ್ ಮಿತ್ರ 2.0 ಯೋಜನೆಯಡಿ ಡೇ-ನಲ್ಮ್ ಸ್ವ-ಸಹಾಯ ಗುಂಪುಗಳನ್ನು ತೊಡಗಿಸಿಕೊಂಡು ವಿಶ್ವ ಪರಿಸರ ದಿನದ ಪ್ರಯುಕ್ತ “ತಾಯಿಯ ಹೆಸರಿನಲ್ಲಿ ಒಂದು ಗಿಡ” ಎಂಬ ಧ್ಯೇಯ ವಾಕ್ಯದೊಂದಿಗೆ ತಾಯಂದಿರನ್ನು ಸ್ಮರಿಸಿ ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆಧ್ಯ ಕರ್ತವ್ಯ ವೆಂದು ತಿಳಿಸಿದರು ಮತ್ತು ಸ್ವ ಸಹಾಯ ಸಂಘದ ಮಹಿಳೆಯರಿಗೆ ತಮ್ಮ ತಮ್ಮ ಮನೆ , ಪರಿಸರದಲ್ಲಿ ಗಿಡ ನೆಡುವಂತೆ ಕೋರಿಕೊಂಡು ತಾಯಿಯ ಹೆಸರಿನಲ್ಲಿ ಗಿಡ ನೆಡುವ ಅಭಿಯಾನಕ್ಕೆ ಮಂಗಳೂರು ಮಹಾನಗರಪಾಲಿಕೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಚಿತ್ತರಂಜನ್ ದಾಸ್ ನಗರ ಅಭಿಯಾನ ವ್ಯವಸ್ಥಾಪಕರು, ಶ್ರೀ ಅಚ್ಚುತ ನಾಯ್ಕ್ ಜಿಲ್ಲಾ ಅಭಿಯಾನ ವ್ಯವಸ್ಥಾಪಕರು, ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆ, ದ.ಕ., ಜಿಲ್ಲೆ, ಸಮುದಾಯ ಸಂಘಟಕರು, ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ದೀಪಾ, ಓಂ ಸಾಯಿ, ಪಂಚಲಿಂಗೇಶ್ವರ, ಮಂಜುಶ್ರೀ, ವಿಜಯನಗರ, ಮಹಾದೇವಿ ಮತ್ತು ಶಾರದಾ ಸ್ವ-ಸಹಾಯ ಗುಂಪಿನ ಸದಸ್ಯರು ಭಾಗವಹಿಸಿದ್ದರು.

ಶ್ರೀಮತಿ ಮಾಲಿನಿ ರೋಡ್ರಿಗಸ್, ಸಮುದಾಯ ಸಂಘಟನಾಧಿಕಾರಿ, ಮ.ನ.ಪಾ., ಮಂಗಳೂರು ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.