ಮಂಗಳೂರು: ನಾಗುರಿ ಬಳಿ ಮನೆಯ ಹಿಂಬದಿಯ ದೊಡ್ಡದಾದ ಕಾಂಪೌಂಡ್ ವಾಲ್ ರಾತ್ರಿ ಸುರಿದ ಮಳೆಗೆ ಕುಸಿದು ಬಿದ್ದ ಪರಿಣಾಮ ಮನೆಯಲ್ಲಿ ಇದ್ದ 3 ಮಂದಿ ಮರಣ ಮತ್ತು3 ಮಂದಿ ಬದುಕಿ ಉಳಿದ ಘಟನೆ ನಡೆದಿದ್ದು, ಈ ಘಟನಾ ಸ್ಥಳಕ್ಕೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಭೇಟಿ ನೀಡಿದರು.

ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್ ಮಂಗಳೂರಿನಲ್ಲಿ ಬಹಳ ದುಃಖಕರ ಘಟನೆ ಸಂಭವಿಸಿದೆ. ಭೀಕರವಾದ ಮಳೆ ಬಂದ ಸಂದರ್ಭ ಕಾಂಪೌಂಡ್ ಕುಸಿದು ಹಳೆಯ ಮಣ್ಣಿನ ಗೋಡೆ ಮನೆ ಮೇಲೆ ಬಿದ್ದು ಅನಾಹುತ ಸಂಭವಿಸಿದೆ.

ಪೊಲೀಸ್ ಮತ್ತು ಇತರ ಅಧಿಕಾರಿಗಳ ಮಾಹಿತಿ ಪ್ರಕಾರ 3 ಮಂದಿ ಮರಣಹೊಂದಿದ್ದು, 3 ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎನ್ನೋ ಮಾಹಿತಿ ಇದೆ. ಆಸ್ಪತ್ರೆಗೆ ತೆರೆಳಿ ಅವರನ್ನ ವಿಚಾರಿಸುತೇನೆ ಎಂದರು.

View this post on Instagram

A post shared by News Karnataka (@newskarnataka)