ಮಂಗಳೂರು: ದೀರ್ಘಕಾಲದಿಂದ ಬಹುಗಂಟುಗಳ ಗಾಯಿಟರ್(ಥೈರಾಯ್ಡ್‌ಗಡ್ಡೆ)ಯಿಂದ ಬಳಲುತ್ತಿದ್ದ 72 ವರ್ಷದ ವೃದ್ಧನಿಗೆ ಹಲವು ಆರೋಗ್ಯ ತೊಡಕುಗಳ ನಡುವೆಯೂ ಮಂಗಳೂರಿನ ಡಾ. ಬಿ ಆರ್ ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ರೋಗಿಯ ವಯಸ್ಸು, ವಿವಿಧ ಆರೋಗ್ಯ ಸಮಸ್ಯೆ ಮತ್ತು ಶಸ್ತ್ರಚಿಕಿತ್ಸೆಯ ಅಪಾಯಗಳ ನಡುವೆಯೂ ಈ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯನ್ನ ಡಾ. ಅವಿನಾಶ್ ಕೆ (ಲ್ಯಾಪರೊಸ್ಕೋಪಿಕ್ ಮತ್ತು ಜನರಲ್‌ ಸರ್ಜನ್), ಡಾ.ಮನೋಹರ್ ಪೈ (ಜನರಲ್ ಸರ್ಜನ್) ಮತ್ತು ಅರಿವಳಿಕೆ ತಜ್ಞರಾದ ಡಾ. ಸುನಿಲ್ ಮತ್ತು ಡಾ. ಫ್ರೀಡಾ ಸೇರಿದಂತೆ ವಿವಿಧ ತಜ್ಞರ ತಂಡವು ಯಶಸ್ವಿಗೊಳಿಸಿದೆ.

ಏನಿದು ಪ್ರಕರಣ?

ರೋಗಿಯು ಆಸ್ಪತ್ರೆಗೆ ಬಂದಾಗ ಎದ್ದು ಕಾಣುವಂತಹ ಗಾಯಿಟರ್ ಗಂಟು ಉಂಟಾಗಿತ್ತು.  ಆದರೆ ಅದೃಷ್ಟವಶಾತ್ ಲಿಂಫಾಡೆನೊಪತಿ ಯ ಲಕ್ಷಣಗಳು ಇರಲಿಲ್ಲ. ಶಸ್ತ್ರಚಿಕಿತ್ಸೆ ನಡೆಸಲು ರೋಗಿಯ ಗಾಯಿಟರ್ ಗಡ್ಡೆಯ ಗಾತ್ರ ಮಾತ್ರವಲ್ಲ ದೇಹದಲ್ಲಿದ್ದ ವಿವಿಧ ಆರೋಗ್ಯ ಸಮಸ್ಯೆಯೂ ತಡೆಯೊಡ್ಡುವಂತಿತ್ತು. ಉಸಿರಾಟದ ಸಮಸ್ಯೆ, ಸೆರೆಬ್ರೊವ್ಯಾಸ್ಕ್ಯೂಲರ್ ರೋಗ, ಹೈಪರ್ ಟೆನ್ಷನ್‌, ಬೆನಿಗ್ನ್‌ಪ್ರೊಸ್ಟಾಟಿಕ್‌ಹೈಪರ್ ಟ್ರೊಫಿ (ಬಿಪಿಹೆಚ್‌) ಮತ್ತು ಮಧುಮೇಹ,  ಅರವಳಿಕೆ ಮತ್ತು ಶಸ್ತ್ರಚಿಕಿತ್ಸೆಯ ಅಪಾಯವನ್ನು ಹೆಚ್ಚಿಸಿತ್ತು. ಶಸ್ತ್ರಚಿಕಿತ್ಸೆ ಸಮಯದಲ್ಲಿ ರೋಗಿಯಲ್ಲಿನ ಗಾಯಿಟರ್‍‌ಗಡ್ಡೆಯು 18×12 ಸೆ.ಮೀಟರ್ ದೊಡ್ಡದಾಗಿತ್ತು.

ಈ ಕುರಿತು ಮಾತನಾಡಿದ, ಲ್ಯಾಪರೊಸ್ಕೋಪಿಕ್ ಮತ್ತು ಜನರಲ್‌ಸರ್ಜನ್‌  ಡಾ. ಅವಿನಾಶ್ ಕೆ, ” ಈ ಪ್ರಕರಣವು ವಿವಿಧ ದೀರ್ಘಕಾಲದ ಆರೋಗ್ಯ ಸಮಸ್ಯೆಯ ಜೊತೆ ಹೆಚ್ಚಿನ ಅಪಾಯ ಹೊಂದಿರುವ ಹಿರಿಯ ವಯಸ್ಸಿನ ರೋಗಿಗಳಲ್ಲಿ ಕೂಡ ದೊಡ್ಡದಾದ ಬಹು ಗಂಟುಗಳ ಗಾಯಿಟರ್ ಗಡ್ಡೆಯನ್ನು ಸುರಕ್ಷಿತವಾಗಿ ಹೊರತೆಗೆಯಬಹುದು ಎಂಬುದಕ್ಕೆ ಉದಾಹರಣೆ. ಸಂಯೋಜಿತ ಕಾರ್ಯ, ಪೆರಿಆಪರೇಟಿವ್‌ಕೇರ್ ಮತ್ತು ಎಚ್ಚರಿಕೆಯ ಶಸ್ತ್ರಚಿಕಿತ್ಸಾ ಕ್ರಮಗಳು ಚಿಕಿತ್ಸೆಯಲ್ಲಿನ ತೊಡಕುಗಳನ್ನು ನಿವಾರಿಸಲು ನೆರವಾಗುತ್ತದೆ ” ಎಂದರು.

ಗಾಯಿಟರ್‌ನ ಗಾತ್ರ, ವಿಕೃತ ಅಂಗರಚನಾ ಶಾಸ್ತ್ರ, ದಟ್ಟವಾದ ಅಂಟಿಕೊಳ್ಳುವಿಕೆಗಳು ಮತ್ತು ಪ್ರಮುಖ ನರನಾಳೀಯ ರಚನೆಗಳಿಗೆ ಗಡ್ಡೆಯು ಹತ್ತಿರವಾಗಿದ್ದರಿಂದ  ಶಸ್ತ್ರಚಿಕಿತ್ಸೆ ತಾಂತ್ರಿಕವಾಗಿ ಕಷ್ಟಕರವಾಗಿತ್ತು. ಸೀಮಿತ ಕುತ್ತಿಗೆ ವಿಸ್ತರಣೆಯು ಮತ್ತಷ್ಟು ಸಂಕೀರ್ಣಗೊಳಿಸಿತ್ತು. ಆದಾಗ್ಯೂ, ನಿಖರವಾದ ಯೋಜನೆ ಮತ್ತು ಕಾರ್ಯಗತಗೊಳಿಸುವಿಕೆಯೊಂದಿಗೆ, ಚಿಕಿತ್ಸಾ ಕಾರ್ಯವಿಧಾನವನ್ನು ಯಶಸ್ವಿಯಾಗಿ ನಡೆಸಲಾಯಿತು. ಶಸ್ತ್ರಚಿಕಿತ್ಸೆಯ ನಂತರದ ಐದನೇ ದಿನ ರೋಗಿಯನ್ನು ಸುರಕ್ಷಿತವಾಗಿ ಡಿಸ್ಚಾರ್ಜ್‌ಮಾಡಲಾಗಿತ್ತು.

ಕೆಎಂಸಿ ಆಸ್ಪತ್ರೆ ಮತ್ತೊಮ್ಮೆ ಹೆಚ್ಚಿನ ಅಪಾಯದ ಸಂದರ್ಭಗಳಲ್ಲಿಯೂ ಸಹ ಸುಧಾರಿತ ಶಸ್ತ್ರಚಿಕಿತ್ಸಾ ಆರೈಕೆ ನೀಡುವ ತನ್ನ ಬದ್ಧತೆಗೆ ಈ ಪ್ರಕರಣ ಸಾಕ್ಷಿಯಾಗಿದೆ. ಈ ಹಂತದಲ್ಲಿ ತಜ್ಞರ ತಂಡಗಳು ಮತ್ತು ಆಧುನಿಕ ಮೂಲ ಸೌಕರ್ಯಗಳ ಬೆಂಬಲದೊಂದಿಗೆ ವಿಶೇಷ ಚಿಕಿತ್ಸೆ ನೀಡುವಲ್ಲಿ ಆಸ್ಪತ್ರೆ ತನ್ನ ಮಾನ ದಂಡಗಳನ್ನು ಸ್ಥಾಪಿಸುವುದನ್ನು ಮುಂದುವರೆಸಿದೆ.