ಮಂಗಳೂರು: ಬಿಸಿಲೆ ಘಾಟ್ ನಲ್ಲಿ ನಡೆದ ಬಸ್ ಅಪಘಾತದಲ್ಲಿ ಸುಮಾರು 20 ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದು ಹಲವರನ್ನು ವಿವಿಧ ಆಸ್ಪತ್ರೆಗೆ ಸಾಗಿಸಲಾಗಿದೆ.
ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದ ತೀವ್ರ ಗಾಯಗೊಂಡ ಮಹಿಳೆಯನ್ನು ಮಂಗಳೂರು ಆಸ್ಪತ್ರೆಗೆ ತುರ್ತು ಸಾಗಿಸುವ ಮದ್ಯೆ ಬಿಸಿ ರೋಡ್ ಬಳಿ ಸ್ಕೂಟಿ ಸವಾರನೊಬ್ಬ ಅಂಬುಲೆನ್ಸ್ ಗೆ ದಾರಿಮಾಡಿಕೊಡದೆ ಸುಮಾರು 4 ಕಿ,ಮೀ, ಸತಾಯಿಸಿದ್ದಾನೆ.
ಅಂಬುಲೆನ್ಸ್ ಚಾಲಕ ಹೋರ್ನ್ ಹಾಕಿದರೂ ಸೈರನ್ ಶಬ್ದವಿದ್ದರೂ ಸ್ಕೂಟಿ ಸವಾರ ದಾರಿ ಬಿಟ್ಟುಕೊಡಲಿಲ್ಲ, ಸ್ಕೂಟಿ ಸವಾರನ ಹುಚ್ಚಾಟವನ್ನು ಸಹಚಾಲಕ ಕಾರ್ತಿಕ್ ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ದೂರು ನೀಡಲು ನಿರ್ಧರಿಸಿದ್ದಾರೆ.

