ಮಂಗಳೂರು : ತೊಕ್ಕೊಟ್ಟು ವಿನಮ್ರ ಬಾರ್ ನಲ್ಲಿ ತಲವಾರು ಹಿಡಿದು ದಾಂಧಲೆ ನಡೆಸಿರುವ ಘಟನೆ ನಡೆದಿದೆ.
ಬಾರ್ ಬಂದ್ ಮಾಡುವಂತೆ ರೌಡಿಶೀಟರ್ ಉಳ್ಳಾಲದ ಶಾಕೀರ್ ತಲವಾರು ಬೀಸಿದ್ದಾರೆ. ರೌಡಿ ದಾಳಿಗೆ ಎರ್ರಾಬಿರ್ರಿ ಮದ್ಯಪ್ರಿಯರು ಓಡಿ ಹೋಗಿದ್ದಾರೆ.
ನಶೆಯಲ್ಲಿ ರೌಡಿಶೀಟರ್ ಶಾಕೀರ್ ತಲವಾರು ಬೀಸಿದ್ದಾರೆ. ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

