ಮಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಳಿ ತಪ್ಪುತ್ತಿದೆ. ಅಲ್ಲಲ್ಲಿ ಕೊಲೆ, ಹಲ್ಲೆ, ಕಲ್ಲು ತೂರಾಟದಂತಹ ಪ್ರಕರಣಗಳು ನಡೆಯುತ್ತಿವೆ.
ಇದೀಗ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುರುಷರಕಟ್ಟೆಯಲ್ಲಿನ ರಾಜ್ಯದ ಪ್ರಸಿದ್ಧ ಬಿಂದು ನೀರಿನ ಕಾರ್ಖಾನೆ ಬಳಿ ಬೋರ್ವೆಲ್ ಕೊರೆಯುತ್ತಿದ್ದ ಲಾರಿ ಮೇಲೆ ಅನ್ಯಕೋಮಿನ ಗುಂಪು ಕಲ್ಲು ತೂರಾಟ ನಡೆಸಿದೆ.
ಬಿಂದು ಕಂಪನಿ, ಬೋರ್ ವೆಲ್ಗಳನ್ನು ಫ್ಲಶ್ ಮಾಡುವ ಬದಲು, ಹೊಸದಾಗಿ ಕೊರೆಸುತ್ತಿದೆ ಎಂದು ಅನ್ಯಕೋಮಿನ ಗುಂಪು ಕಲ್ಲು ತೂರಾಟ ಮಾಡಿದೆ. ಬಳಿಕ ಎರಡೂ ಕಡೆಯಿಂದ ಪರಸ್ಪರ ಕಲ್ಲು ತೂರಾಟವಾಗಿದೆ. ಎರಡೂ ಕಡೆ ಗುಂಪುಗಳಿಂದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.

