ಸುಳ್ಯ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲು ಮನೆಯೊಂದಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದ್ದ ಶಿಕ್ಷಕಿಯ ಮೇಲೆ ನಾಯಿ ದಾಳಿ ನಡೆಸಿದ ಘಟನೆ ಶುಕ್ರವಾರ ಸುಳ್ಯ ತಾಲೂಕಿನ ಕೊಡಿಯಾಲ ಎಂಬಲ್ಲಿ ಸಂಭವಿಸಿದೆ.
ಕೊಡಿಯಾಲದ ನಿದ್ಮಾರು ಎಂಬಲ್ಲಿನ ಮನೆಗೆ ಮೂವಪ್ಪೆ ಶಾಲಾ ಶಿಕ್ಷಕಿಯೋರ್ವರು ಸಮೀಕ್ಷೆಗೆ ತೆರಳಿದ ವೇಳೆ ಮನೆಯ ನಾಯಿ ದಾಳಿ ನಡೆಸಿದ್ದು, ಪರಿಣಾಮ ಶಿಕ್ಷಕಿಯ ಉಡುಪು ಹರಿದು ಹೋಗಿದೆ. ನಾಯಿಗೆ ಬ್ಯಾಗ್ ಅಡ್ಡ ಹಿಡಿದಿದ್ದು, ಈ ವೇಳೆ ಮನೆಯವರು ಬಂದು ನಾಯಿಯನ್ನು ಹಿಡಿದುಕೊಂಡಿದ್ದಾರೆ.

