ಮಂಗಳೂರು : ನಗರ ಹೊರವಲಯದ ಗುರುಪುರ ಸಮೀಪದ ಬಂಡಸಾಲೆ ಎನ್ನುವಲ್ಲಿ V2 Guys ಗುರುಪುರ ಯುವ ಬಳಗವೂ ಹೊಸ ರೀತಿಯಲ್ಲಿ ನಿರ್ಮಿಸಿದ ಬಸ್ ತಂಗುದಾಣ ಜನ ಮನ ಸೆಳೆಯುತ್ತಿದೆ.

ಬಸ್ ರೀತಿಯಲ್ಲೇ ನಿರ್ಮಿಸಿದ ಬಸ್ ತಂಗುದಾಣ ವಿಶೇಷ ರೀತಿಯಲ್ಲಿ ನಿರ್ಮಾಣಗೊಂಡ ಬಂಡಸಾಲೆ ತಂಗುದಾಣ ಆಕರ್ಷಣೀಯವಾಗಿ ರೂಪುಗೊಂಡಿದೆ. ಸುಮಾರು 7 ಲಕ್ಷ ಮೊತ್ತದಲ್ಲಿ ಈ ಬಸ್ ತಂಗುದಾಣವನ್ನು ನಿರ್ಮಿಸಲಾಗಿದೆ. ಈ ಹಿಂದೆ ಇಲ್ಲಿದ್ದ ಬಸ್ ತಂಗುದಾಣ ಪಾಳು ಬಿದ್ದಿತ್ತು.