ಮಂಗಳೂರು : ಶ್ರೀ ದತ್ತ ಭಕ್ತರ ಸಹಯೋಗದೊಂದಿಗೆ ಶಿವ ಸೇನಾ ಮಂಗಳೂರು ಇದ್ರ ವತಿಯಿಂದ 7ನೇ ವರ್ಷದ ದೀಪೋತ್ಸವ ಕಾರ್ಯಕ್ರಮವನ್ನ ಮಂಗಳೂರು ಪಿವಿಎಸ್ ಬಳಿ ಇರುವ ಲಕ್ಷ್ಮಿ ನಾರಾಯಣಿ ದೇವಸ್ಥಾನದಲ್ಲಿ ಆನಂದ್ ಶೆಟ್ಟಿ ಅಡ್ಯಾರ್ ಮುಖಂಡರು ಶಿವ ಸೇನಾ ಮಂಗಳೂರು ಇವರ ನೇತೃತ್ವದಲ್ಲಿ ನಡೆಯಿತು.
ಅಶೋಕ್ ಶೇಟ್ ಪ್ರದಾನ ಅರ್ಚಕರು ಲಕ್ಷ್ಮಿ ನಾರಾಯಣಿ ದೇವಸ್ಥಾನ ಇವರು ದೀಪ ಬೆಳಗಿಸಿ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಜನರು ಮತ್ತು ಶಿವ ಸೇನಾ ಕಾರ್ಯಕ್ರತರು ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬಳಿಕ ಆನಂದ್ ಶೆಟ್ಟಿ ಅಡ್ಯಾರ್ ಮುಖಂಡರು ಶಿವ ಸೇನಾ ಕರ್ನಾಟಕ ಮಾಧ್ಯಮಕ್ಕೆ ಮಾಹಿತಿಯನ್ನ ನೀಡಿದರು.

