ಬಂಟ್ವಾಳ : ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ಎನ್ನಲಾದ ಸುಮಾರು 11 ಕೆ.ಜಿ. ದನದ ಮಾಂಸವನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡ ಘಟನೆ ಕಾವಳಪಡೂರು ಗ್ರಾಮದ ಗುಂಪುಕಲ್ಲು ಎಂಬಲ್ಲಿ ನಡೆದಿದೆ.

ಆ.29ರಂದು ಮಧ್ಯಾಹ್ನ 3.20ರ ಸುಮಾರಿಗೆ ದೊರೆತ ಮಾಹಿತಿಯ ಆಧಾರದಲ್ಲಿ ಪೊಲೀಸರು ಗುಂಪುಕಲ್ಲು ನಿವಾಸಿ ಸಿರಾಜ್ ಅವರ ಮನೆಯ ಹಿಂಬದಿಯ ಶೆಡ್‌ಗೆ ತೆರಳಿ ಪರಿಶೀಲನೆ ನಡೆಸಿದಾಗ ಫ್ರಿಡ್ಜ್’ನ ಮೇಲ್ಬಾಗದಲ್ಲಿ ಪ್ಲಾಸ್ಟಿಕ್ ಕವರ್‌ಗಳಲ್ಲಿ ಮಾಂಸ ಪತ್ತೆಯಾಗಿದೆ.

ತಲಾ ಒಂದು ಕೆ.ಜಿ.ಯಂತೆ 10 ಪಾರದರ್ಶಕ ಕವ‌ಗರ್‌ಗಳು ಹಾಗೂ ಒಂದು ಕಪ್ಪು ಕವರ್‌ನಲ್ಲಿದ್ದ ಒಟ್ಟು ಸುಮಾರು 11 ಕೆ.ಜಿ. ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇದರ ಅಂದಾಜು ಮೌಲ್ಯ 2,200 ಎಂದು ತಿಳಿಸಲಾಗಿದೆ. ಇನ್ನು ಸಿರಾಜ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.