ಮಂಗಳೂರು: ಕರ್ನಾಟಕ ಸರಕಾರದ ವಿಧಾನ ಪರಿಷತ್ ಶಾಸಕರಾದ ಶ್ರೀ ಐವನ್ ಡಿ ಸೋಜರವರ ನೇತೃತ್ವದಲ್ಲಿ ಕಳೆದ 9 ವರ್ಷಗಳಿಂದ ಸರ್ವ ಧರ್ಮಗಳ ಭಾವೈಕ್ಯತೆಯ ಸಂಗಮವಾದ ದೀಪಾವಳಿ, ಕ್ರಿಸ್ ಮಸ್ ರಂಜಾನ್ ಹಬ್ಬಗಳನ್ನು ಸರ್ವ ಧರ್ಮಿಯರು ಸೇರಿಕೊಂಡು ಬಹಳ ವಿಜೃಂಜಣೆಯಿಂದ ಆಚರಿಸಲಾಗುತ್ತಿದೆ.
ಈ ವರ್ಷ 10ನೇ ವರ್ಷದ (ದಶಮಾನೋತ್ಸವದ) ಪ್ರಯುಕ್ತ ಅ.31 ರಂದು ಗುರುವಾರ ನಗರದ ಕದ್ರಿ ಪಾರ್ಕಿನ ಸುವರ್ಣ ಕಲಾ ಮಂಟಪದಲ್ಲಿ ಸಂಜೆ 3ಗಂಟೆಯಿಂದ ಚಿತ್ರಕಲಾ ಸ್ಪರ್ಧೆ, ಗೂಡುದೀಪ ಸ್ಪರ್ಧೆ ಹಾಗೂ ಕುಣಿತ ಭಜನೆ ಸ್ಪರ್ಧೆಗಳನ್ನು ಜರಗಲಿದೆ.
ಕಾರ್ಯಕ್ರಮದ ಯಶಸ್ವಿಗೆ ಜೆ.ನಾಗೇಂದ್ರ ಕುಮಾರ್ ರವರ ಸಂಚಾಲಕತ್ವದಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಇದೀಗ ಸಕಲ ಸಿದ್ದತೆಗಳು ನಡೆಯುತ್ತಿದೆ. ಕಳೆದ ವರ್ಷ ಚಿತ್ರಕಲಾ ಸ್ಪರ್ಧೆಯಲ್ಲಿ ಸುಮಾರು 400 ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು. 3 4 ಶ್ರೇಣಿಗಳಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಹಾಗೂ ಆಧುನಿಕ ಮತ್ತು ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ ಮತ್ತು ಕುಣಿತ ಭಜನೆ ಸ್ಪರ್ಧೆಗಳು ನಡೆಯಲಿದ್ದು, ಸಂಜೆ 4.30ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿರುವುದು. ಸಂಜೆ 5.00 ಗಂಟೆಗೆ ಕುಣಿತ ಭಜನೆ ಸ್ಪರ್ಧೆಯು ನಡೆಯಲಿದೆ.

1.ಕುಣಿತ ಭಜನೆ ಸ್ಪರ್ಧೆಯಲ್ಲಿ ಪ್ರತಿ ತಂಡದಲ್ಲಿ 10 ಜನರಿಗಿಂತ ಮೇಲಿರಬಾರದು. 20ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ಪ್ರಥಮ ಬಹುಮಾನ ರೂ.15,000/-, ದ್ವಿತೀಯ 10,000/-, ತೃತೀಯ 5,000/- ಭಾಗವಹಿಸಿದ ಎಲ್ಲಾ ತಂಡಗಳಿಗೆ ರೂ.1,000/- ಗೌರವ ಸಂಭಾವಣೆಯನ್ನು ನೀಡಿ ಗೌರವಿಸಲಾಗುವುದು.
2. ಚಿತ್ರಕಲಾ ಸ್ಪರ್ಧೆಯಲ್ಲಿ ದೀಪಾವಳಿಯ ವೈಶಿಷ್ಟತೆಯ ಬಗ್ಗೆ ಕಲ್ಪನೆಯ ವಿಷಯವಾಗಿದ್ದು, ಸ್ಪರ್ಧೆಯಲ್ಲಿ4 ವರ್ಗಗಳಿವೆ. ಪ್ರಾಥಮಿಕ(1ರಿಂದ 4ನೇ ತರಗತಿ, 5, 6, 7ನೇ ತರಗತಿ), ಹೈಸ್ಕೂಲು 8ರಿಂದ 10ನೇ ತರಗತಿ, ಪಿಯುಸಿ ಹಾಗೂ ಡಿಗ್ರಿ ಪದವಿ ಮತ್ತು ಮೇಲ್ಪಟ್ಟ ಎಲ್ಲಾ ವಯೋಮನದವರಿಗೆ 45 ನಿಮಿಷಗಳ ಕಾಲಾವಕಾಶ ನೀಡಲಾಗುವುದು. ಪ್ರಥಮ ಬಹುಮಾನ 5,000/0, ದ್ವಿತೀಯ ಬಹುಮಾನ 3,000/-, ತೃತೀಯ ಬಹುಮಾನ 2,000/- 4 ಶ್ರೇಣಿಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧೆ ನಡೆಯಲಿದ್ದು, ಅವರಿಗೆ ಪದಕ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಗುವುದು.
3. ಗೂಡುದೀಪ ಸ್ಪರ್ಧೆ- ಆಧುನಿಕ ಮತ್ತು ಸಾಂಪ್ರದಾಯಿಕ ವಿಭಾಗದಲ್ಲಿ ನಡೆಯಲಿದ್ದು, ಸರಿಯಾಗಿ 5.30ಗಂಟೆಗೆ ಚಾಲನೆ ನೀಡಲಾಗುವುದು. ಗೂಡುದೀಪ ಸ್ಪರ್ಧೆಯು ಕದ್ರಿ ಪಾರ್ಕಿನ ಒಳಗಡೆ ನಡೆಯಲಿರುವುದು ಹಾಗೂ ಈ ವರ್ಷ ದಶಮಾನೋತ್ಸವ ಅಂಗವಾಗಿ ಸುಮಾರು 300 ಗೂಡುದೀಪಗಳು ನಮ್ಮ ಈ ಸ್ಪರ್ಧೆಗೆ ಭಾಗವಹಿಸುವ ನಿರೀಕ್ಷೆಯನ್ನು ಹೊಂದಿರುತ್ತೇವೆ.
ಆಧುನಿಕ ವಿಭಾಗ:ಪ್ರಥಮ ನಗದು ರೂ.7,000/-, ದ್ವಿತೀಯ 5,000/-, ತೃತೀಯ 3,000/- ಸಾಂಪ್ರದಾಯಿಕ ವಿಭಾಗ: ಪ್ರಥಮ ನಗದು ರೂ.7,000/-, ದ್ವಿತೀಯ 5,000/-, ತೃತೀಯ 3,000/-ಹಾಗೂ ಭಾಗವಹಿಸಿದ ಎಲ್ಲಾ ಗೂಡುದೀಪ ತಂಡದವರಿಗೆ ಗೌರವಧನ ಹಾಗೂ ಸಮಧಾನಕರ ಬಹುಮಾನ ನೀಡಲಾಗುವುದು. ಚಿತ್ರಕಲಾ ಸ್ಪರ್ಧೆ ನೊಂದಾವಣೆಗಾಗಿ ಪ್ರಗತಿ ಬೇಕಲ್ (9686261829), ಮೀನಾ ಟೆಲ್ಲಿಸ್ (7022436831), ಬಬಿತಾ ಡಿ ಸೋಜ, ವಿದ್ಯಾ ತೋರಸ್, ಶ್ರೀಮತಿ ವಿದ್ಯಾ ಅತ್ತಾವರ,, ಗೂಡುದೀಪ ಸ್ಪರ್ಧೆ ನೊಂದಾವಣಿಗಾಗಿ ಮಹೇಶ್ ಕೋಡಿಕಲ್ (9743597991), ವಿಕಾಸ್ ಶೆಟ್ಟಿ(9916021942, ಮನೀಶ್ ಬೋಳಾರ್, ಕುಣಿತ ಸ್ಪರ್ಧೆ ನೊಂದಾವಣೆಗಾಗಿ ໙໖ (9964818276), ಭಾಸ್ಕರ್ ರಾವ್ ಇವರುಗಳನ್ನು ಸಂಪರ್ಕಿಸಬಹುದಾಗಿದೆ. ಕೊನೆಯ ದಿನಾಂಕ 28/10/2024ರೊಳಗೆ ನೊಂದಾಯಿಸಬೇಕಾಗಿ ಕೇಳಲಾಗಿದೆ.
ಪತ್ರಿಕಾ ಗೋಷ್ಠಿಯಲ್ಲಿ ಶಾಸಕರಾದ ಶ್ರೀ ಐವನ್ ಡಿ ಸೋಜ, ಜಿ.ನಾಗೇಂದ್ರ ಕುಮಾರ್, ಸತೀಶ್ ಬೆಂಗಲ್, ಚಂದ್ರಹಾಸ್ ಕುಲಾಲ್, ಭಾಸ್ಕರ್ ರಾವ್, ಪ್ರದೀಪ್ ಬೇಕಲ್ ಮುಂತಾದವರುಗಳು ಉಪಸ್ಥಿತರಿದ್ದರು.

