ಮಂಡ್ಯ: ಕೆ.ಆರ್.ಸಾಗರ ಬೃಂದಾವನಕ್ಕೆ ಬಂದಿದ್ದ ಕೇರಳ ಮೂಲದ ಬಸ್ ಹಿಂಬದಿ ಚಲಿಸಿ ಕೇರಳ ಮೂಲದ ಮಹಿಳೆ ಸಾವನಪ್ಪಿರುವ ಘಟನೆ ಬೃಂದಾವನ ಬಸ್ ಪಾರ್ಕಿಂಗ್ ನಲ್ಲಿ ನಡೆದಿದೆ.

ಕೇರಳ ಮೂಲದ ಕೊಲ್ಲಂ ಬಳಿ ಗ್ರಾಮದ ಮಹಿಳೆ ಬೃಂದಾವನ ವೀಕ್ಷಣೆ ಮಾಡಿಬಂದು ಊಟ ಮಾಡುತ್ತಿರುವಾಗ ಅಲ್ಲೇ ನಿಂತಿದ್ದ ಕೇರಳ ಕೊಪ್ಪಂ ನಿಂದ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆತಂದಿದ್ದ ಬಸ್  ನ್ನು ಚಾಲಕ ಚಾಲನೆ ಮಾಡಲು ಬ್ರೇಕ್ ತೆಗೆದು ಚಾಲನೆ ಮುಂದಾದ್ದ ಸಂದರ್ಭದಲ್ಲಿ ಏಕಾ ಏಕಿ ಹಿಂಬದಿ ಚಲ್ಲಿಸಿದ  ಕಾರಣ ಹಿಂದೆ ಕಟ್ಟೆಯಲ್ಲಿ ಕುಳಿತು ಊಟ ಮಾಡುತ್ತಿದ್ದ,

ಇಬ್ಬರು ಮಹಿಳೆಯ ಮೇಲೆ ಗುದ್ದಿದ ಕಾರಣ ತೀವೃವಾಗಿ ತಲೆ, ಮುಖ ಹಾಗು ಕಣ್ಣುಗಳಿಗೆ ತೀವೃವಾಗಿ ಗಾಯಗೊಂಡಿರುವ ಕಾರಣ ಬಸ್ ಮೂಲಕ ಮೈಸೂರು ಖಾಸಗಿ ಆಸ್ಪತ್ರೆಗೆ ತೆಗೆದು ಕೊಂಡಿದ್ದು ಅಲ್ಲಿ ಕೌಸಲ್ಯ  ಎಂಬ ಮಹಿಳೆ ಸಾವನಪ್ಪಿದ್ದು, ಗಾಯಗೊಂಡಿದ್ದ ನಾರಯಣಿ ಎಂಬ ಮಹಿಳೆ ತೀವ್ರವಾಗಿ ನಿಗ ಘಟಕದಲ್ಲಿರಿಸಲಾಗಿದೆ.

ಸ್ಥಳಕ್ಕೆ ಕೆ.ಆರ್.ಸಾಗರ ಪೊಲೀಸ್ ಠಾಣೆ ಪಿ.ಎಸ್.ಐ ರಮೇಶ್ ಕರಕಿಕಟ್ಟೆ ಬೇಟಿ ನೀಡಿ ಪರಿಶೀಲನೆ ಮಾಡಿ ಪ್ರವಾಸಿಗರಿಂದ ಮಾಹಿತಿ ಪಡೆದರು.