ಮಂಡ್ಯ: ಮಂಡ್ಯದಲ್ಲಿ ಚಿರತೆಗಳ ಹಾವಳಿ ಮುಂದುವರೆದಿದೆ. ಚಿರತೆ ದಾಳಿಗೆ ಎರಡು ಕರುಗಳು ಬಲಿಯಾಗಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಕಾಪನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ವಾರದ ಹಿಂದೆ ಕಾಪನಹಳ್ಳಿಯ ಗವಿಮಠದ ಸಮೀಪ ಕಾಣಿಸಿಕೊಂಡಿದ್ದ ಚಿರತೆ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿತ್ತು. ಸುತ್ತಮುತ್ತ ಗ್ರಾಮಗಳ ಜಾನುವಾರುಗಳ ಮೇಲೆ ದಾಳಿ ಚಿರತೆ ಮಾಡುತ್ತಿದೆ.
ಇದೀಗ ಗವಿಮಠದ ಆವರಣದಲ್ಲಿ ಕಟ್ಟಿದ್ದ ಕರುಗಳ ಮೇಲೆ ಚಿರತೆ ದಾಳಿ ಮಾಡಿದೆ. ದೂರು ನೀಡಿದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಚಿರತೆ ಸೆರೆಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

