ಮಂಡ್ಯ: ಇಂದು ವರ್ಷದ ಮೊದಲ ಚಂದ್ರಗ್ರಹಣ ಹಿನ್ನೆಲೆ ಜಿಲ್ಲೆಯ ಬಹುತೇಕ ದೇಗುಲಗಳ ದರ್ಶನ ಸಮಯ ಬದಲಾವಣೆ ಮಾಡಲಾಗಿದೆ.
ಗ್ರಹಣದ ವೇಳೆ ದೇಗುಲದ ಬಾಗಿಲು ಬಂದ್ ಮಾಡಲಾಗಿದ್ದು, ಪೂಜೆ ಸ್ಥಗಿತಗೊಳಿಸಲಾಗಿದೆ. ಗ್ರಹಣ ಕಾಲದಲ್ಲಿ ದೋಷ ತಾಕದಂತೆ ದೇವರಿಗೆ ಜಲಾಭಿಷೇಕ. ಗ್ರಹಣ ಮುಗಿದ ಬಳಿಕ ದೇಗುಲ ಶುದ್ದೀಕರಣ ಮಾಡಿ, ದೇವರಿಗೆ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ.
ಜಿಲ್ಲೆಯ ಪ್ರಸಿದ್ಧ ದೇಗುಲಗಳಾದ ಶ್ರೀರಂಗಪಟ್ಟಣದ ಶ್ರೀ ರಂಗನಾಥ ಸ್ವಾಮಿ, ಗಂಜಾಮ್ ನ ನಿಮಿಷಾಂಭ, ಮೇಲುಕೋಟೆಯ ಚಲುವನಾರಾಯಣಸ್ವಾಮಿ, ನಾಗಮಂಗಲದ ಸೌಮ್ಯಕೇಶವ, ಆದಿ ಚುಂಚನಗಿರಿಯ ಕಾಲಭೈರವೇಶ್ವರ, ಅರ್ಕೇಶ್ವರ ದೇಗುಲ ಮಧ್ಯಾಹ್ನ 12 ಗಂಟೆಗೆ ಬಂದ್ ಮಾಡಿ ಸಂಜೆ 7-30ಕ್ಕೆ ಓಪನ್ ಮಾಡಿ ಪೂಜೆ ಮಾಡಲಾಗುತ್ತದೆ.
ಈ ವೇಳೆ ಕೆಲವು ದೇಗುಲಗಳಲ್ಲಿ ಗ್ರಹಣದ ಬಳಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಕೆಲವು ದೇಗುಲಗಳಿಗೆ ನಿರ್ಬಂಧ ಹೇರಲಾಗಿದೆ. ಶ್ರೀರಂಗಪಟ್ಟಣದ ಕಾಳಿ ದೇಗುಲದಲ್ಲಿ ಮಾತ್ರ ಗ್ರಹಣಕ್ಕೆ ಸೆಡ್ಡು. ಈ ದೇಗುಲದಲ್ಲಿ ಗ್ರಹಣ ಕಾಲದಲ್ಕೂ ಎಂದಿನಂತೆ ಪೂಜೆ, ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಗ್ರಹಣ ಪ್ರಕೃತಿ ವಿಸ್ಮಯ, ಕೆಡುಕಾಗದೆಂದು ಭಕ್ತರಿಗೆ ಸ್ವಾಮೀಜಿ ಉಪದೇಶ ನೀಡಿದರು.

