ಮಂಡ್ಯ: ಪಾತ್ರೆ ತೊಳೆಯಲು ಹೋದ ಮೂವರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಸಮೀಪದ ಬೋರೆ ಗ್ರಾಮದ ಬಳಿ ಶನಿವಾರ ಸಂಜೆ ನಡೆದಿದೆ.
ಮಹದೇವಪುರ ಸಮೀಪದ ರಾಮಸ್ವಾಮಿ ನಾಲೆಯಲ್ಲಿ ಕೊಚ್ಚಿ ಹೋಗಿದ್ದಾರೆ. ಅನಿ 9ನೇ ತರಗತಿ, ತರ್ಬೀನ್ 7ನೇ ತರಗತಿ, ಆಫ್ರಿನ್ 7ನೇ ತರಗತಿ ಮೃತರು. ಮೈಸೂರಿನ ಉದಯಗಿರಿಯ ಹಜಿರ ನಿಶ್ವಾನ್ ಅರೇಬಿಕ್ ಶಾಲೆ ವಿದ್ಯಾರ್ಥಿಗಳು. ಬಟ್ಟೆ, ಪಾತ್ರೆ ತೊಳೆಯುವ ಸಲುವಾಗಿ 15 ವಿದ್ಯಾರ್ಥಿಗಳನ್ನ ನಾಲ್ವರು ಸಿಬ್ಬಂದಿ ಕರೆತಂದಿದ್ದರು.
ಈ ವೇಳೆ ಓರ್ವ ವಿದ್ಯಾರ್ಥಿ ನೀರಿನಲ್ಲಿ ಮುಳುಗಿದ್ದ.ಆತನ ರಕ್ಷಣೆಗೆ ಹೋದ ಇತರೆ ಐವರ ಮುಳುಗಡೆಯಾಗಿದ್ದಾರೆ. ಈ ವೇಳೆ ಮೂವರನ್ನ ಸ್ಥಳೀಯರು ರಕ್ಷಿಸಿದ್ದಾರೆ. ಉಳಿದ ಮೂವರು ನೀರು ಪಾಲಾಗಿದ್ದಾರೆ. ನೀರು ಪಾಲಾದ ಮೂವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

