ಮಂಡ್ಯ: ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ದಿಢೀರ್ ನಾಪತ್ತೆಯಾದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿಯ ಬಿಜಿ ಪುರದಲ್ಲಿ ನಡೆದಿದೆ. ಕಾವೇರಿ ನದಿಯಲ್ಲಿ ಹಾರಿರುವ ಶಂಕೆ ವ್ಯಕ್ತವಾಗಿದ್ದು ಗ್ರಾಮಲೆಕ್ಕಾಧಿಕಾರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಬಿ.ಜಿ.ಪುರದ ನಾಡಕಚೇರಿಯಲ್ಲಿ ಕೆಲಸ ಮಾಡ್ತಿದ್ದ ವಿಎ ನಿರಂಜನ್ ನಾಪತ್ತೆಯಾದವರು. ನಿನ್ನೆ ಮಧ್ಯಾಹ್ನ 1 ಗಂಟೆವರೆಗೂ ಕಚೇರಿಯಲ್ಲಿಯೇ ಇದ್ದರು.ಬಳಿಕ ತನ್ನ ಬೈಕ್ ನಲ್ಲಿ ಹೊರಟಿದ್ದ ವಿಎ ನಿರಂಜನ್ ರವರ ಬೈಕ್ ಕೊಳ್ಳೇಗಾಲದ ಕಾವೇರಿ ಪುರ ಸೇತುವೆ ಮೇಲೆ ಪತ್ತೆಯಾಗಿದೆ.

ಬೈಕ್ ನಿಲ್ಲಿಸಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ನಿರಂಜನ್ ಗಾಗಿ ಅಗ್ನಿಶಾಮಕ ದಳದೊಂದಿಗೆ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.