ಮಂಡ್ಯ: ಕೆ.ಆರ್.ಎಸ್.ನಲ್ಲಿ ನಿರ್ಮಿಸಲಾಗುತ್ತಿರುವ ಅಮ್ಯೂಸ್ ಮೆಟ್ ಪಾರ್ಕ್ ಗೆ ಮಾಜಿ ಸಂಸದೆ ಸುಮಲತಾ ವಿರೋಧಿಸಿದ್ದಾರೆ. ಸರ್ಕಾರದ ನಡೆಗೆ ಸೋಷಿಯಲ್ ಮೀಡಿಯಾ ಮೂಲಕ ಸರ್ಕಾರಕ್ಕೆ ಸುಮಲತಾ ಎಚ್ಚರಿಕೆ ನೀಡಿದ್ದಾರೆ.
KRSನಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ನಿರ್ಮಾಣಕ್ಕೆ ನಿರ್ಧರಿಸಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಂಡ್ಯ ಜನರು, ರೈತ ಸಂಘಟನೆಗಳ ಪರ ನಿಂತಿದ್ದಾರೆ. ವಿರೋಧದ ನಡುವೆಯೂ ಸರ್ಕಾರ ತನ್ನ ನಿರ್ಧಾರ ಹಿಂಪಡೆಯದಿರೋದು ಖಂಡನೀಯ.ಇದು ಕೇವಲ ಒಂದು ಅಣೆಕಟ್ಟೆಯಲ್ಲ. ಅದು ನಮ್ಮ ಇತಿಹಾಸ, ಸಂಸ್ಕೃತಿ, ಮಂಡ್ಯ ಜನತೆಯ ಜೀವನಾಡಿ.

ಅದರ ಪಾವಿತ್ರ್ಯತೆ, ಪರಿಸರ ಸೂಕ್ಷ್ಮತೆ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಮಂಡ್ಯದ ಅಭಿವೃದ್ಧಿಗೆ ಆದ್ಯತೆ ನೀಡಿ.ಅದರ ಬದಲು ದುಂದುವೆಚ್ಚಕ್ಕೆ ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಈ ಯೋಜನೆಯ ವಿರೋಧಕ್ಕೆ ನನ್ನ ಬೆಂಬಲ.
ಕನ್ನಂಬಾಡಿ ಕಟ್ಟೆಯ ಅಸ್ತಿತ್ವಕ್ಕೆ ಧಕ್ಕೆ ತರುವ ಯಾವುದೇ ಯೋಜನೆ ಜಾರಿಗೆ ತರಲು ಸ್ವಾಭಿಮಾನಿ ಮಂಡ್ಯದ ಜನತೆ ಅವಕಾಶ ಕೊಡಲಾರೆವು ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

