ಮಂಡ್ಯ:  ಮದ್ದೂರಿನ ಮಸೀದಿ ಬಳಿ ಕಲ್ಲು ತೂರಾಟ ಪ್ರಕರಣ ನಡೆದಿದ್ದು,  ಘಟನೆ ನಡೆದ ದಿನ ವಿಡಿಯೋ ಮಾಡಿದ ಕಾರಣಕ್ಕೆ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಚನ್ನೇಗೌಡ ಬಡಾವಣೆಯ ನಿವಾಸಿ ಅಜಯ್(30)  ಮೇಲೆ ಅಂದು ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಮಸೀದಿ ಬಳಿ ನಿಂತು ಮೊಬೈಲ್ ನಲ್ಲಿ ವಿಡಿಯೋ ಮಾಡ್ತಿದ್ದಕ್ಕೆ ಅನ್ಯಕೋಮಿನವರಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಈತನ ಮೇಲೆ ಕಲ್ಲುಗಳು ಹಾಗು ದೊಣ್ಣೆಯಿಂದ  ಅನ್ಯ ಕೋಮಿನ ಯುವಕರು ಹಲ್ಲೆ ನಡೆಸಿದ್ದಾರೆ.

ತೀವ್ರತರವಾದ ಹಲ್ಲೆಯಿಂದ ಸ್ಥಳದಲ್ಲೇ  ಯುವಕ ಅಜಯ್ ಕುಸಿದು ಬಿದ್ದಿದ್ದನು. ಈತನನ್ನು ಸ್ಥಳೀಯರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ‌ ಕೊಡಿಸಿದ್ದಾರೆ. ಘಟನೆಯ ಸ್ಟೋಟಕ ಮಾಹಿತಿಯನ್ನು ದೂರುದಾರ ಯುವಕ ಬಿಚ್ಚಿಟ್ಟನು. ಮಾರಣಾಂತಿಕ ಹಲ್ಲೆಯಿಂದ ಚೇತರಿಸಿಕೊಳ್ತಿರೋ ಅಜಯ್ ನಿಂದ ಕಿಡಿಗೇಡಿಗಳ ಕೃತ್ಯ ಬಯಲಾಗಿದೆ.