ಮಂಡ್ಯ: ಸವಾರನಿಂದ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ರಭಸವಾಗಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಹುಣಸನಹಳ್ಳಿ ಬಳಿ ಜರುಗಿದೆ.

ಮೃತಪಟ್ಟ ಯುವಕನನ್ನು ಮಂಡ್ಯ ತಾಲೂಕಿನ ಕಾಳೇನಹಳ್ಳಿ ಗ್ರಾಮದ ಮಂಜುನಾಥ್(28) ಎಂದು ಗರುತಿಸಲಾಗಿದ್ದು, ಈತ ತನ್ನ ಬೈಕಿನಲ್ಲಿ ಬುಧವಾರ ಸಂಜೆ ಕೊಡಿಯಾಲ ಗ್ರಾಮ ಕಡೆಯಿಂದ ಕಾಳೇನಹಳ್ಳಿ ಗ್ರಾಮ ಕಡೆಗೆ ವೇಗವಾಗಿ ಆಗಮಿಸುತ್ತಿದ್ದ ವೇಳೆ ಮಾರ್ಗ ಮದ್ಯದ ಹುಣಸನಹಳ್ಳಿ ಗ್ರಾಮದ ಬಳಿ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಬೈಕ್ ರಭಸವಾಗಿ ಡಿಕ್ಕಿ ಹೊಡೆದಪರಿಣಾಮ ತಲೆ ಎರಡು ಹೋಳಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ವಿಷಯ ತಿಳಿದು ಸ್ಥಳಕ್ಕೆ ಅರಕೆರೆ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದು, ಬಳಿಕ ಶವವನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.