ಮಂಡ್ಯ: ಕಾವೇರಿ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ಪ್ರತಿಭಟನೆ ಆರಂಭವಾಗಿದೆ. ಸಂಜಯ ವೃತ್ತದಲ್ಲಿ ಹುರುಳಿಕಾಳು ಉರಿದು, ಖಾಲಿ ಮಡಿಕೆ ಹಿಡಿದು ಹೋರಾಟಗಾರರು ರಸ್ತೆಗೆ ಇಳಿದಿದ್ದಾರೆ.
ಕನ್ನಡ ಸೇನೆ, ರೈತ ಸಂಘದಿಂದ ವಿಭಿನ್ನ ಹೋರಾಟ ಶುರುವಾಗಿದೆ. ಹಳೆ ಬೆಂ-ಮೈ ಹೆದ್ದಾರಿ ತಡೆದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುರುಳಿ ಕಾಳು ಉರಿದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಮಂಡ್ಯ ರೈತರಿಗೆ ಹುರುಳಿ ಭಾಗ್ಯ ನೀಡಿದೆ ಎಂದು ಕಿಡಿ ಕಾರಿದ್ದಾರೆ. CWMA, CWRC ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ. ತಮಿಳುನಾಡಿಗೆ ಒಂದು ಹನಿ ನೀರುಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

