ಮಂಡ್ಯ: ದೂರು ಅರ್ಜಿಗೆ ಸ್ಪಂದಿಸದ ಲೋಕಾಯುಕ್ತ ಅಧಿಕಾರಿಗಳ ವಿರುದ್ದ RTI ಕಾರ್ಯಕರ್ತರೊಬ್ಬರು ಗಂಧದ ಕಟ್ಟಿ ಪ್ಯಾಕೆಟ್ ಗಳನ್ನ ರವಾನೆ ಮಾಡಿ ಪೂಜೆ ಸಲ್ಲಿಸುವಂತೆ ವ್ಯಂಗ್ಯ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ದೂರು ಅರ್ಜಿಗೆ ನಿಮ್ಮ ಅರ್ಜಿ ಕಡತದಲ್ಲಿದೆ ಎಂಬ ಲೋಕಾಯುಕ್ತದಿಂದ ಹಿಂಬರಹ ಬಂದ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತರು ಅಧಿಕಾರಿಗಳ ವರ್ತನೆಯನ್ನ ಈ ರೀತಿ ವ್ಯಂಗ್ಯ ಮಾಡಿದ್ದಾರೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಪಟ್ಟಣದ ಸಾಮಾಜಿಕ ಹೋರಾಟಗಾರ ಮಂಜುನಾಥ್ ಗಂಧದ ಪ್ಯಾಕೆಟ್ ರವಾನಿಸಿದವರು. ಎರಡು ವರ್ಷದ ಹಿಂದೆ ಪಟ್ಟಣದ ಖಾಸಿಂಖಾನ್ ಸಮುದಾಯ ಭವನದ ಅಕ್ರಮದ ತನಿಖೆಗೆ ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ಅರ್ಜಿ ಕೊಟ್ಟಿದ್ದರು.
ದೂರು ಕೊಟ್ಟು ಎರಡು ವರ್ಷ ಕಳೆದರು ಯಾವುದೇ ಕ್ರಮ ಜರುಗಿಸದೆ ಲೋಕಾಯುಕ್ತ ಅಧಿಕಾರಿಗಳ ಮೀನಾಮೇಷ ಎಣಿಸುತ್ತಿದ್ದರು. ಈ ಕುರಿತು ದೂರು ಅರ್ಜಿಯ ಕ್ರಮದ ಬಗ್ಗೆ RTI ಮೂಲಕ ಮಾಹಿತಿ ಕೇಳಿದಾಗ ನಿಮ್ಮ ದೂರು ಅರ್ಜಿ ಕಡತದಲ್ಲಿದೆ ಎಂದು ಹಿಂಬರಹ ನೀಡಿದ್ದಾರೆ.
ನಿರ್ಲಕ್ಷ್ಯದ ಹಿಂಬರಹ ಕಾರಣ ನೋಡಿ ಗಂಧದ ಕಡ್ಡಿಯ ಪ್ಯಾಕೇಟ್ ಗಳನ್ನು ಕಳಿಸಿದ RTI ಕಾರ್ಯಕರ್ತ ಆ ಕಡತದಲ್ಲಿರೋ ಅರ್ಜಿಗೆ ನಿತ್ಯ ಪೂಜೆ ಮಾಡಿ ಎಂದು ವ್ಯಂಗ್ಯವಾಡಿದ್ದಾರೆ. ಲೋಕಾಯುಕ್ತ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ಹಿಂಬರಹಕ್ಕೆ RTI ಕಾರ್ಯಕರ್ತ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

