ಮಂಡ್ಯ: 60 ವರ್ಷದ ವೃದ್ಧನ ಜೊತೆ 20 ವರ್ಷದ ಯುವತಿ ವಾಟ್ಸಾಆ್ಯಪ್ನಲ್ಲಿ ಚಾಟಿಂಗ್ ಮಾಡಿ ಲಕ್ಷ, ಲಕ್ಷ ಪಂಗನಾಮ ಹಾಕಿದ್ದಾರೆ ಎನ್ನಲಾಗಿದೆ. ಮಂಡ್ಯದ ಪಾಂಡವಪುರ ಮೂಲದ ಅರ್ಚಕ ಈಗ ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ.
ಪಾಂಡವಪುರದ ಅರ್ಚಕನಿಗೆ ತೆಲಂಗಾಣದ ಮಹಿಳೆಯ ಫೋಟೋ ಬಳಸಿ ಮೋಸ ಮಾಡಲಾಗಿದೆ. ತೆಲಂಗಾಣ ಮೂಲದ ಸಿರಿ ಶ್ರೇಷಾ ಸರಿತಾ ಅನ್ನೋ ಹೆಸರಿನಲ್ಲಿ ನಕಲಿ ಫೇಸ್ಬುಕ್ ಅಕೌಂಟ್ ಓಪನ್ ಮಾಡಲಾಗಿದೆ. ಅದರಲ್ಲಿ 60 ವರ್ಷದ ಅರ್ಚಕನ ಜೊತೆ ಚಾಟಿಂಗ್ ಮಾಡಿ ಮೋಸ ಮಾಡಿದೆ ಎಂದು ದೂರು ನೀಡಲಾಗಿದೆ.
ಯುವತಿ ಮಾತು ನಂಬಿದ ಅರ್ಚಕರು ಆನ್ಲೈನ್ನಲ್ಲಿ ಹಣ ಕಳುಹಿಸಿ ಲಕ್ಷ, ಲಕ್ಷ ಹಣ ಕಳೆದುಕೊಂಡಿದ್ದಾರೆ. ಪಾಂಡವಪುರ ತಾಲೂಕಿನ ಪಟ್ಟ ಸೋಮನಹಳ್ಳಿ ಗ್ರಾಮದ ವಿಜಯಕುಮಾರ್ ಹಣ ಕಳೆದುಕೊಂಡಿರುವವರು. ವೃತ್ತಿಯಲ್ಲಿ ಅರ್ಚಕನಾಗಿರುವ ವಿಜಯ್ ಕುಮಾರ್ಗೆ ಫೇಸ್ ಬುಕ್ನಲ್ಲಿ ಯುವತಿ ಪರಿಚಯ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದ ಬಳಿಕ ಇಬ್ಬರ ನಡುವೆ ಆತ್ಮೀಯ ಸಂಭಾಷಣೆ ನಡೆದಿದೆ. ಯುವತಿಯು ಹಲವು ಕಾರಣ ಹೇಳಿ ಆಗಾಗ ಹಣ ಕೇಳುತ್ತಿದ್ದರಂತೆ. ಯುವತಿಯ ಮಾತು ನಂಬಿ ಅರ್ಚಕರು ಫೋನ್ ಪೇ, ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ.
ಅರ್ಚಕ ವಿಜಯ್ ಕುಮಾರ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದ ಯುವತಿ ಹಲವು ಬಾರಿ ಸಿಗುವುದಾಗಿ ಹೇಳಿ ವಂಚಿಸಿದ್ದಾರೆ. ಯುವತಿಯು ಸಿಗದೇ, ಹಣ ವಾಪಸ್ ಬರದೇ 60 ವರ್ಷದ ವೃದ್ಧ ಈಗ ಕಂಗಾಲಾಗಿದ್ದಾರೆ. ಫೇಕ್ ಐಡಿ ಬಳಸಿ, ನಂಬಿಸಿ ಹಣ ವಸೂಲಿ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಮಂಡ್ಯ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.

