ಮಂಡ್ಯ: ವಿದೇಶ ಪ್ರವಾಸ ಮುಗಿಸಿ ಬಂದ ಶಾಸಕ ಉದಯ್ ಮದ್ದೂರಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ನಡೆಸಿ ಸ್ಪಷ್ಟನೆ ನೀಡಿದರು. ಮಗಳ ವಿದ್ಯಾಭ್ಯಾಸದ ದೃಷ್ಟಿಯಿಂದ ನಾನು ವಿದೇಶಕ್ಕೆ ಹೋಗಿದ್ದೆ. ಯಾವುದೇ ಮೋಜು ಮಸ್ತಿಗೆ ನಾನು ಹೋಗಿರಲಿಲ್ಲ. ಆ ಸಂಧರ್ಭದಲ್ಲಿ ನನ್ನ ಕ್ಷೇತ್ರದ ಪಟ್ಟಣದಲ್ಲಿ ಈ ಘಟನೆ ನಡೆದಿದೆ ಎಂದರು.

ಇದು ನಡೆಯಬಾರದಿತ್ತು ನಾನು ಘಟನೆ ನಡೆದ ಕ್ಷಣದಿಂದಲೂ ಪೊಲೀಸರ ಸಂಪರ್ಕದಲ್ಲಿದ್ದೆ. ನಾನು ಪೊಲೀಸರಿಂದ  ಕ್ಷಣ ಕ್ಷಣಕ್ಕೂ ಮಾಹಿತಿ ಪಡೆದು ಸೂಚನೆ ನೀಡ್ತಿದ್ದೆ. ನಾನು ಕ್ಷೇತ್ರದಲ್ಲಿ4 ವರ್ಷದಿಂದ ಸೇವೆ ಮಾಡ್ತಾ ಬಂದಿದ್ದಿನಿ. ಕಲ್ಲು ಹೊಡೆದ ಕಿಡಿಗೇಡಿಗಳು ಕ್ಷಮೆ ಇಲ್ಲ ಅವರನ್ನು ಈಗಾಗಲೇ ಬಂಧಿಸಿದ್ದೇವೆ. ಈ ಘಟನೆಯನ್ನು ಬಳಸಿಕೊಂಡು ಕೆಲವರು ಅಪಪ್ರಚಾರ ಮಾಡಿದ್ದಾರೆ ಎಂದರು.

ಅಲ್ಲದೆ ಇದನ್ನೆ ಬಳಸಿ ಕೆಲವರಿ ಬೆಂಕಿ ಹಚ್ಚುವ ಕೆಲಸ ಮಾಡ್ತಿರೋದು ಯಾರಿಗೂ ಒಳ್ಳೆಯದಲ್ಲ. ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ತಿರೋದು ನಿಜಕ್ಕೂ ಖಂಡನಾರ್ಹ. ನಾವುಗಳು ಹಿಂದೂಗಳೇ ಹಿಂದೂಗಳೆ ಇದ್ದೀವಿ ಇಲ್ಲಿನ ಜನರನ್ನು ಎತ್ತಿಕಟ್ಟುವ ಕೆಲಸ ಮಾಡ್ತಿದ್ದಾರೆ. ಇದು ಮಂಡ್ಯ ಜಿಲ್ಲೆಯ ಎಲ್ಲಿಂದಲೋ ಬಂದವರು ಶಾಂತಿ ಕದಡುವ ಕೆಲಸ ಮಾಡ್ತಿದ್ದಾರೆ.

ಇದು ನಿಜಕ್ಕೂ ಒಳ್ಳೇಯ ಬೆಳವಣಿಗೆ ಅಲ್ಲ,ಬೇರೆಯವರು ಬಮನದು ಇಲ್ಲಿ ಶಾಂತಿ ಕದಡುವುದು ಬೇಡ. ಮೊದಲು ಅವರ ಮನೆಯ ತೂತು ಮುಚ್ಚುಕೊಳ್ಳುವ ಕೆಲಸ ಮಾಡ್ಲಿ, ಪ್ರತಾಪ ಸಿಂಹ ನನ್ನು ನಾಯಿ ,ಕಚ್ಚೆ ಹರಿಕ ಎಂದು ಉದಯ್ ವಾಗ್ದಾಳಿ ನಡೆಸಿದರು.