ಮಂಡ್ಯ: ಮೇಲುಕೋಟೆ ಯೋಗಾನರಸಿಂಹಸ್ವಾಮಿ ದೇಗುಲದ ಹುಂಡಿ ಹಣ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನ ಅರ್ಚಕ ಸೇರಿದಂತೆ 6 ಮಂದಿಯನ್ನ ಅಮಾನತುಗೊಳಿಸಲಾಗಿದೆ.

ಕರ್ತವ್ಯಲೋಪದ ಆರೋಪದ ಮೇಲೆ ಅಮಾನತ್ತು ಮಾಡಿ ಡಿಸಿ ಆದೇಶ ಹೊರಡಿಸಿದ್ದಾರೆ. ಪ್ರಧಾನ ಅರ್ಚಕ ನಾರಾಯಣಭಟ್, ಪಾರು ಪತ್ತೆಗಾರ ಶೀಧರ, ಪರಿಚಾರಕ ತಿರುವೆಂಗಡಾಚಾರ್, ಕಾವಲುಗಾರ ಗಂಗಾಧರ್ ಮತ್ತು ಬಸವರಾಜು, ಮಣೇಗಾರ ಕಸ್ತೂರಿ ಶ್ರೀನಿವಾಸನ್ ಅಮಾನತ್ತುಗೊಂಡವರು.
ಜ.11 ರಂದು ಘಟನೆ ನಡೆದಿತ್ತು. ಜೂನ್ ನಲ್ಲಿ ಇಒ ಶೀಲಾರವರು 6 ಜನರ ವಿರುದ್ದ ದೂರು ನೀಡಿದ್ದರು. ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ 6 ಜನರ ವಿರುದ್ದ ಪ್ರಕರಣ ದಾಖಲಾಗಿತ್ತು.

