ಮಂಡ್ಯ: ಪ್ರವಾಸಿ ತಾಣ ಮೇಲುಕೋಟೆಯಲ್ಲಿ ಭಾರೀ ಗಾತ್ರದ ಚಿರತೆ ಸೆರೆಯಾಗಿದೆ. ಜಾನುವಾರುಗಳನ್ನು ತಿಂದು ಉಪಟಳ ನೀಡ್ತಿದ್ದ ಚಿರತೆ ಕಡೆಗೂ ಸಿಕ್ಕಿದೆ. ಮೇಲುಕೋಟೆ ಚಲುವನಾರಾಯಸ್ವಾಮಿ ದೇಗುಲದ ಸಮೀಪವೇ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿದೆ.
3 ವರ್ಷ ಪ್ರಾಯದ ಭಾರೀ ಗಾತ್ರದ ಗಂಡು ಚಿರತೆ ಬೋನಿಗೆ ಬಿದ್ದಿದೆ. ಬೋನಿಗೆ ಬಿದ್ದ ಚಿರತೆ ನೋಡಲು ಮೇಲುಕೋಟೆ ಜನರು ಮುಗಿಬಿದ್ದಿದ್ದಾರೆ. ಸೆರೆ ಸಿಕ್ಕ ಚಿರತೆಯನ್ನು ದೂರದ ಅರಣ್ಯಕ್ಕೆ ಬಿಡಲು ಅರಣ್ಯ ಇಲಾಖೆ ಸಿಬ್ಬಂದಿ ಕೊಂಡೊಯ್ದರು.

