ಮಂಡ್ಯ: ಮುಸ್ಲಿಂ ಗೃಹಿಣಿಗೆ ಹಿಂದುಗಳಿಂದ ಸೀಮಂತ ಕಾರ್ಯ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಮುಸ್ಲಿಂ ಸಮುದಾಯದ ತುಂಬು ಗರ್ಭಿಣಿಗೆ ಹಿಂದೂ ಸಂಪ್ರದಾಯದಂತೆ ಸೀಮಂತ ನಡೆಸಿದ ಘಟನೆ ಮಂಡ್ಯದ ಕೆ.ಆರ್.ಪೇಟೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಗ್ರಾಜುಯೇಟ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವಾರ್ಷಿಕ ಸಭೆಯಲ್ಲಿ ಸೀಮಂತ ಕಾರ್ಯ ನಡೆಸಲಾಯಿತು. ಹಿಂದೂ ಮಹಿಳೆಯರಿಂದ ಮುಸ್ಲಿಂ ಮಹಿಳೆಗೆ ಉಡಿ ತುಂಬಿ ಹಿಂದೂ ಸಂಪ್ರದಾಯದಂತೆ ಸೀಮಂತ ನಡೆಸಿದರು.
ಮುಸ್ಲಿಂ ಸಮುದಾಯದ ನಗ್ಮಾಭಾನುಗೆ ಹಿಂದೂ ಸಂಪ್ರದಾಯದಂತೆ ಸೀಮಂತ ನಡೆಸಲಾಯಿತು. ನಗ್ಮಾಭಾನು ಪಟ್ಟಣದ ಗ್ರಾಜುಯೇಟ್ಸ್ ಸೊಸೈಟಿಯ ಸಿಬ್ಬಂದಿಯಾಗಿದ್ದು, ಕೋಮು ಸೌಹಾರ್ದತೆಗೆ ಸೀಮಂತ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

