ಮಂಡ್ಯ: ಟ್ರಾನ್ಸ್ಫಾರ್ಮರ್ ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಆತಂಕ ಸೃಷ್ಡಿಯಾದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕೆ‌.ಬೆಟ್ಟಹಳ್ಳಿ ಬಳಿಯ ವಿಜಯಕಾಳಿ ಮಠದ ಬಳಿ ನಡೆದಿದೆ.

ಪಾಂಡವಪುರ ಕೆ.ಆರ್‌.ಪೇಟೆ ರಾಜ್ಯ ಹೆದ್ದಾರಿಯಲ್ಲಿರುವ ವಿಜಯಕಾಳಿ ಮಠದ ಬಳಿ ಇರುವ ಟ್ರಾನ್ಸ್ ಫಾರ್ಮರ್ ಏಕಾಏಕಿ ಸ್ಟೋಟಗೊಂಡು ಬೆಂಕಿ ಹೊತ್ತಿ ಉರಿದಿದೆ. ಟ್ರಾನ್ಸ್‌ಫಾರ್ಮರ್ ನಿಂದ ಡೀಸೆಲ್ ಸೋರಿಕೆಯಾಗಿ ನೆಲಕ್ಕೂ ಬೆಂಕಿ ಸ್ಪರ್ಶವಾಗಿ ಒಣಗಿದ ಸಸ್ಯಗಳನ್ನ ಆಹುತಿ ಪಡೆದಿದೆ.

ಘಟನೆಯಿಂದ ಕೆಲಕಾಲ ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನ ಸವಾರರಲ್ಲಿ ಆತಂಕವಾಗಿದೆ. ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

View this post on Instagram

A post shared by News Karnataka (@newskarnataka)