ಮಂಡ್ಯ: ಮದಿನಾ ಹೋಟೆಲ್ ನಲ್ಲಿ ನಾಯಿ ಮಾಂಸ ಮಿಕ್ಸ್ ಮಾಡಿ ಬಿರಿಯಾನಿ ಮಾರಾಟ ಮಾಡಿದ ಆರೋಪಕ್ಕೆ ಪೊಲೀಸರು ಎಂಟ್ರಿ ಕೊಟ್ಟು ನಿಜಾಂಶ ತಿಳಿಸಿದ್ದಾರೆ. ಅದು ಕೋಳಿ ಮಾಂಸ ಎಂದು ಖಚಿತಪಡಿಸಿದ್ದು ಪರಿಶೀಲನೆಗಾಗಿ ವಶಕ್ಕೆ ಪಡೆದಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಘಟನೆ ಬೆಳಕಿಗೆ ಬಂದಿತ್ತು.

ಮದೀನಾ ಹೋಟೆಲ್ ಗೆ ಮಾಂಸ ತಂದ ವ್ಯಕ್ತಿಯನ್ನ ಹಿಡಿದು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದರು. ಇದು ಮೇಕೆ ಮಾಂಸವಲ್ಲ, ನಾಯಿ ಮಾಂಸವೆಂದು ಜನರ ಆರೋಪಿಸಿದ್ದರು. ಪಾಂಡವಪುರ ಪೊಲೀಸರು ವ್ಯಕ್ತಿಯನ್ನ ವಿಚಾರಣೆಗೆ ಒಳಪಡಿಸಿದ್ದರು.

ಹೋಟೆಲ್ ಗೆ ತಂದಿದ್ದು ನಾಯಿ ಮಾಂಸ ಅಲ್ಲ, ಕೋಳಿ ಮಾಂಸ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳ ಪರಿಶೀಲನೆ ನಡೆಸಿದ ಬಳಿಕ ಮಾಹಿತಿ ನೀಡಿದ್ದಾರೆ. ಆದರೆ ಈ ಮಾಂಸ ತಿನ್ನಲು ಯೋಗ್ಯವಾಗಿದಿಯಾ? ಇಲ್ವ? ಎಂದು ಖಚಿತ ಪಡಿಸಿಕೊಳ್ಳಲು ಪರೀಕ್ಷೆಗಾಗಿ ಲ್ಯಾಬ್ ಗೆ ಕಳುಹಿಸಿದ್ದಾರೆ.