ಮಂಡ್ಯ: ಮಂಡ್ಯ ಜಿಲ್ಲೆ ಕೆ.ಆರ್.ಎಸ್. ಸಮೀಪದ ಚಿಕ್ಕಾಯರಹಳ್ಳಿ ವಿಸಿ ನಾಲೆಯ ಮಡುವಿನಲ್ಲಿ ಮೊಸಳೆ ಕಾಣಿಸಿಕೊಂಡಿದೆ. ನೀರಿನ ಮಟ್ಟ ಕಡಿಮೆ ಆದ ಹಿನ್ನಲೆ ಮೊಸಳೆ ಕಾಣಿಸಿಕೊಂಡಿದೆ.

ದನಗಳಿಗೆ ನೀರು ಕುಡಿಸಲು ಹೋದಾಗ ಕಂಡು ಬಂದಿದೆ. ಗ್ರಾಮಸ್ಥರು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಶೀಘ್ರ ಮೊಸಳೆ ಹಿಡಿದು ಸ್ಥಳಾಂತರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.