ಮಂಡ್ಯ: ವಕಾಲತ್ತು ವಿಚಾರದಲ್ಲಿ ಘರ್ಷಣೆಯಾಗಿ ವಕೀಲರಿಬ್ಬರು ಪರಸ್ಪರ ಬಡಿದಾಡಿಕೊಂಡ ಘಟನೆ ಮಂಡ್ಯ ಜಿಲ್ಲೆ ಕೆಆರ್ ಪೇಟೆಯಲ್ಲಿ ನಡೆದಿದೆ.

ಅಪಘಾತ ಪ್ರಕರಣವೊಂದರ ವಕಾಲತ್ತು ವಿಚಾರಕ್ಕೆ ವಕೀಲರ ನಡುವೆ ಮಾರಾಮಾರಿ ನಡೆದಿದೆ ಎನ್ನಲಾಗಿದ್ದು, ಕೆ.ಆರ್.ಪೇಟೆ ವಕೀಲ ಸಂಘದ ಅಧ್ಯಕ್ಷ ನಾಗೇಗೌಡ ಹಾಗೂ ವಕೀಲ ಬೋರೇಗೌಡ ಎಂಬ ಇಬ್ಬರು ವಕೀಲರೇ ಬಡದಾಡಿಕೊಂಡಿದ್ದಾರೆ.

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗಳ ಪರವಾಗಿ ವಕಲತ್ತು ವಹಿಸಲು ಇಬ್ಬರು ವಕೀಲರ ನಡುವೆ ವಾಗ್ವಾದ ನಡೆದು, ನಂತರ ಮಾತಿಗೆ ಮಾತು ಬೆಳೆದು ಬೋರೇಗೌಡ ಕಚೇರಿಯಲ್ಲಿ ನಾಗೇಗೌಡ ನುಗ್ಗಿ ದಾಂದಲೆ ಮಾಡಿ ಬೋರೇಗೌಡನ ಮೇಲೆ ಹಲ್ಲೆ ಮಾಡಿದ್ದು ಗಂಭೀರ ಗಾಯವಾಗಿದೆ ಎನ್ನಲಾಗಿದೆ.

ಪರಸ್ಪರ ಹೊಡೆದಾಟದಲ್ಲಿ ವಕೀಲ ಬೋರೇಗೌಡ, ನಾಗೇಗೌಡ, ಮದ್ಯ ಪ್ರವೇಶಿಸಿ ಬಿಡಿಸಲು ಹೊದ ಪ್ರಸನ್ನ ಕುಮಾರ್ ಎಂಬುವವರಿಗೂ ಗಾಯವಾಗಿದೆ. ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎರಡು ಕಡೆಯಿಂದಲೂ ಪ್ರಕರಣ ದಾಖಲಾಗಿದೆ.