ಮಂಡ್ಯ: ದಾರಿತಪ್ಪಿ ಕಾಡಿನಿಂದ ನಾಡಿಗೆ ಬಂದ ಒಂಟಿಸಲಗ ದಿಕ್ಕಾಪಾಲಾಗಿ ಓಡಾಡಿ ಆತಂಕ ಸೃಷ್ಟಿಸಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಗುಂಡಾಪುರ ಗ್ರಾಮದ ಅರಣ್ಯ ಇಲಾಖೆ ಕಚೇರಿ ಬಳಿಯೇ ಒಂಟಿ ಸಲಗ ಪುಂಡಾಟ ನಡೆಸುತ್ತಿದೆ.
ಅರಣ್ಯ ಇಲಾಖೆ ಸಿಬ್ಬಂದಿ, ಸಾರ್ವಜನಿಕರ ಜೊತೆ ಕಾಡಾನೆ ಪುಂಡಾಟ ನಡೆಸುತ್ತಿದೆ. ಕಾಡಿಗಟ್ಟಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಅಟ್ಟಾಡಿಸಿದೆ.ಮತ್ತು ಬರಿಸುವ ಇಂಜೆಕ್ಷನ್ ಕೊಟ್ಟರು ಪ್ರಜ್ಞೆ ತಪ್ಪದ ಒಂಟಿ ಸಲಗ ದಿಕ್ಕಾಪಾಲಾಗಿ ಓಡಾಡಿ ಭೀತಿ ಸೃಷ್ಟಿಸಿದೆ.
ಅರಣ್ಯಾಧಿಕಾರಿ ಕಚೇರಿ ಸುತ್ತಮುತ್ತಲೇ ಅಡ್ಡಾಡುತ್ತಿರುವ ಒಂಟಿ ಸಲಗವನ್ನ ಕಾಡಿಗಟ್ಟಲು ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಯ ಹರಸಾಹಸ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆ ಕಚೇರಿ ಸುತ್ತಮುತ್ತಲಿನ ಖಾಸಗಿ ಲೇಔಟ್, ಜಮೀನುಗಳಲ್ಲಿ ಓಡಾಡಿರುವ ವಿಡಿಯೋ ದೃಶ್ಯಗಳು ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿವೆ.

