ಮಂಡ್ಯ: ಕಳ್ಳತನಕ್ಕಾಗಿ ಮುಸುಕು ಧರಿಸಿ ದೇವಾಲಯ ಪ್ರವೇಶಿಸಿದ ಕಳ್ಳ ಹುಂಡಿಗೆ ಕೈಮುಗಿದು ಕೃತ್ಯವೆಸಗದೆ ಬರಿಗೈಲಿ ವಾಪಸ್ ತೆರಳಿದ ಪ್ರಕರಣ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕದಲೂರು ಗ್ರಾಮದಲ್ಲಿ ನಡೆದಿದೆ. ಕೈಮುಗಿದು ವಾಪಸ್ ತೆರಳುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಗ್ರಾಮದ ಪಟ್ಟಲದಮ್ಮ ದೇಗುಲದಲ್ಲಿ ಕಳ್ಳತನ ಮಾಡಲು ಬಾಗಿಲು ಮುರಿದು ಒಳ ಪ್ರವೇಶಿಸಿ ಹುಂಡಿ ಮುಂದೆ ನಿಂತು ಕೈಮುಗಿದು ವಾಪಸ್ಸು ತೆರಳಿದ್ದಾನೆ. ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.